ತಿರುವನಂತಪುರ: ಪ್ರಶಸ್ತಿ ವಿಜೇತ ಗಾಯಕ ರಸೂಲ್ ಪೂಕುಟ್ಟಿ ಅವರು ತಮ್ಮ ಹುಟ್ಟೂರು ಅಂಚಲ್ ನ 33 ಸರ್ಕಾರಿ ಆಸ್ಪತ್ರೆಗಳನ್ನು ನವೀಕರಿಸುವ ಯೋಜನೆಗೆ ಮುಂದಾಗಿ ಮಾದರಿಯಾಗಿದ್ದಾರೆ. ದೇಶದ ಉತ್ತಮ ಸರ್ಕಾರಿ ಆಸ್ಪತ್ರೆಗಳ ಬಯಕೆಯಿಂದ ಈ ನಿರ್ಧಾರಕ್ಕೆ ಪ್ರೇರಣೆಯಾಯಿತೆಂದು ಅವರು ಹೇಳಿರುವರು.
28 ಆರೋಗ್ಯ ಉಪ ಕೇಂದ್ರಗಳು, ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರವನ್ನು ನವೀಕರಿಸಲಾಗುತ್ತಿದೆ. ಈ ಒಪ್ಪಂದಕ್ಕೆ ಸಚಿವೆ ಕೆ.ಕೆ.ಶೈಲಜ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜನ್ ಎನ್.ಖೋಬ್ರಗಡೆ ಉಪಸ್ಥಿತಿಯಲ್ಲಿ ಉಪಸ್ಥಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರಸೂಲ್ ಪೂಕುಟ್ಟಿ ಅವರ ಕೆಲಸ ಅನುಕರಣೀಯವಾಗಿದೆ ಎಂದು ಆರೋಗ್ಯ ಸಚಿವೆ ಶ್ಲಾಘಿಸಿರುವರು.