ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳಕ್ಕೆ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಅವರು ಕೊಚ್ಚಿಗೆ ಬರುತ್ತಿದ್ದಾರೆ. ಅವರು ಬಿಜೆಪಿ ಸಮಿತಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅವರು ಚೆನ್ನೈಗೆ ಭೇಟಿ ನೀಡಿದ ಬಳಿಕ ಕೊಚ್ಚಿಗೆ ಆಗಮಿಸುವರು. ಇಂದು ಮಧ್ಯಾಹ್ನ 2.45 ಕ್ಕೆ ಪ್ರಧಾನಿ ಕೊಚ್ಚಿ ನೌಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿ.ಎಚ್.ಎಸ್.ಇ. ಶಾಲಾ ಮೈದಾನಕ್ಕೆ ತೆರಳಲಿದ್ದಾರೆ.
6,000 ಕೋಟಿ ರೂ.ಗಳ ವೆಚ್ಚದಲ್ಲಿ ಕೊಚ್ಚಿ ಸಂಸ್ಕರಣಾಗಾರದಲ್ಲಿ ಪೆÇ್ರಪೈಲೀನ್ ಉತ್ಪನ್ನಗಳ ಪೆಟ್ರೋಕೆಮಿಕಲ್ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ, ಕೊಚ್ಚಿ ಪೆÇೀರ್ಟ್ ಟ್ರಸ್ಟ್ ನಿರ್ಮಿಸಿದ ಇಂಟನ್ರ್ಯಾಷನಲ್ ಕ್ರೂಸ್ ಟರ್ಮಿನಲ್, 25.72 ಕೋಟಿ ರೂ.ಗಳ ವೆಚ್ಚದಲ್ಲಿ ಎರ್ನಾಕುಳಂ ವಾರ್ಫ್, ವಿಜ್ಞಾನ್ ಸಾಗರ್ ಕ್ಯಾಂಪಸ್ ನ ಹೊಸ ಕಟ್ಟಡ, ಶಿಪ್‍ಯಾರ್ಡ್ ತರಬೇತಿ ಕೇಂದ್ರ, ಮತ್ತು ಕೊಚ್ಚಿ ಬಂದರಿನಲ್ಲಿ ನವೀಕರಿಸಿದ ಕೋಲ್ ಬರ್ತ್ ಉದ್ಘಾಟಿಸುವರು.
ಕೊರೋನದ ವಿಸ್ತರಣೆಯ ದೃಷ್ಟಿಯಿಂದ ಸಂಸ್ಕರಣಾಗಾರ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಲ್ಲಾ ಯೋಜನೆಗಳ ಉದ್ಘಾಟನೆ ಏಕಕಾಲಕ್ಕೆ ನಡೆಯಲಿದೆ. ಅವರು ಸಂಜೆ 5.55 ಕ್ಕೆ ಹಿಂದಿರುಗಲಿದ್ದಾರೆ. ಚುನಾವಣೆಯ ಘೋಷಣೆಗೆ ದಿನಗಣನೆಗಳಿರುವಂತೆ ಪ್ರಧಾನ ಮಂತ್ರಿಗಳ ಕೇರಳ ಭೇಟಿ ವಿಶೇಷ ಮಹತ್ವ ಪಡೆಯಲಿದೆ.