ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಗುಮ್ಮಣ್ಣ ಶೆಟ್ಟಿ ಜೈನ್ ದತ್ತಿ ಉಪನ್ಯಾಸ ಹಾಗೂ ಗಣೇಶ್ ಪ್ರಸಾದ್ ಪಾಣೂರು ಅವರ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಇಂದು(ಫೆ.17ರಂದು) ಬೆಳಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಉದ್ಘಾಟಿಸುವರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು.
ತುಳು ಕನ್ನಡ ಕಲೆ, ಸಾಹಿತ್ಯ, ಸಂಸೃತಿ ಬಾಂಧವ್ಯ ದತ್ತಿ ಉಪನ್ಯಾಸವನ್ನು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ನೀಡುವರು.
ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಪಿ.ಗಣೇಶ್ ಪ್ರಸಾದ್ ಪಾಣೂರು ಅರ ಕೇರಳ ಸಮಗ್ರ ಪಿಎಸ್‍ಸಿ ಕನ್ನಡ ಗೈಡ್ ಕೃತಿ ಲೋಕಾರ್ಪಣೆಯನ್ನು ಕಸಾಪ ಅಧ್ಯಕ್ಷ ಎಸ್.ವಿ.ಭಟ್ ನಿರ್ವಹಿಸುವರು.
ಕಾರ್ಯಕ್ರಮದಲ್ಲಿ ಗಾನ ಪ್ರತಿಭೆಗಳಿಂದ ಗಾನ ಸುಧೆ ನಡೆಯಲಿದೆ. ವಿದ್ಯಾ ಸರಸ್ವತಿ, ರಾಮಚಂದ್ರ ಭಟ್ ಪಿ. ಧರ್ಮತ್ತಡ್ಕ, ಸುಬ್ಬಣ್ಣ ಶೆಟ್ಟಿ, ನವೀನ್ ಚಂದ್ರ ಎಂ.ಎಸ್. ಮತ್ತಿತರರು ಉಪಸ್ಥಿತರಿರುವರು.