ಜನಮೈತ್ರಿ ಪೋಲೀಸ್ ಕುಂಬಳೆ ಹಾಗೂ ಹೆಲ್ತ್ ಕೋರ್ಟ್ ಕುಂಬಳೆಯ ಜಂಟಿ ಆಶ್ರಯದಲ್ಲಿ ವಿಶೇಷ ಉಚಿತ ವ್ಯೆದ್ಯಕೀಯ ಶಿಬಿರ ನಾಳೆ
ಕುಂಬಳೆ: ಕುಂಬಳೆಯ ಜನಮೈತ್ರಿ ಪೊಲೀಸ್ ಮತ್ತು ಹೆಲ್ತ್ ಕೋರ್ಟ್ ಕುಂಬಳೆಯ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಭಾನುವಾರ ಆಯೋಜಿಸಲಾಗಿದೆ.
ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ ಎಂದು ಕುಂಬಳೆ ಜನಮೈತ್ರಿ ಪೋಲೀಸ್ ಎಸ್.ಐ.ಕೆಪಿವಿ ರಾಜೀವ್ ಕುಂಬಳೆಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂಬಳೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿರುವ ವಿವಿಧ ಕಾಲನಿಗಳಿಗೆ ಭೇಟಿ ನೀಡಿ ಮನೆಗಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಅನೇಕರನ್ನು ಗುರುತಿಸಲಾಗಿದ್ದು ಅವರನ್ನು ಗುರಿಯಾಗಿಸಿ ಈ ಶಿಬಿರ ಆಯೋಜಿಸಲಾಗಿದೆ. ಮತ್ತು ಸುಮಾರು 100 ರೋಗಿಗಳನ್ನು ಪೊಲೀಸರು ನೇರವಾಗಿ ಶಿಬಿರಕ್ಕೆ ನೋಂದಾಯಿಸಿದ್ದಾರೆ ಎಂದವರು ಮಾಹಿತಿ ನೀಡಿದರು.
ಮಂಗಳೂರಿನ ಖ್ಯಾತ ವೈದ್ಯ ಡಾ. ಫಿಲಿಪ್ ಆಂಟನಿ ಅವರ ಮಾರ್ಗದರ್ಶನದಲ್ಲಿ ರೋಗಿಗಳನ್ನು ಪರೀಕ್ಷಿಸಲಾಗುವುದು.ಶಿಬಿರದಲ್ಲಿ ಪಾಲ್ಗೊಂಡು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಮಂಗಳೂರು ಕನಚೂರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಮತ್ತು ಹೆಚ್ಚಿನ ವೆಚ್ಚ
ಬೇಕಾದಲ್ಲಿ ಇತರರ ನೆರವಿಗೆ ಪ್ರಯತ್ನಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್‌ಐ ಅವರೊಂದಿಗೆ ಜನಮೈತ್ರಿ ಬೀಟ್ ಅಧಿಕಾರಿ ಮೋಹನ್ ಪಿವಿ ಮತ್ತು ಹೆಲ್ತ್ ಕೋರ್ಟ್ ವ್ಯವಸ್ಥಾಪಕ ಫಾಝಿಲ್ ಉಪಸ್ಥಿತರಿದ್ದು ಮಾತನಾಡಿದರು.