HEALTH TIPS

ಪೋಲೀಸ್ ಕಮಾಂಡರ್ ಯತೀಶ್ ಚಂದ್ರ ಕರ್ನಾಟಕ ಕೇಡರ್ ಗೆ

         ತಿರುವನಂತಪುರ:ಕೇರಳ ಪೋಲೀಸ್ ಕಮಾಂಡರ್ ಕರ್ನಾಟಕ ಮೂಲದ ಯತೀಶ್ ಚಂದ್ರ ಇನ್ನು ಕರ್ನಾಟಕ ಪೋಲೀಸ್ ಕೇಡರ್ ನ ಭಾಗವಾಗಲಿದ್ದಾರೆ. ಕೇಂದ್ರ ಗೃಹ ಸಚಿವಾಲಯದೊಂದಿಗೆ ಕರ್ನಾಟಕ ಬೆಟಾಲಿಯನ್ ಗೆ ಸೇರ್ಪಡೆಗೊಳಿಸಲು ಯತೀಶ್ ಚಂದ್ರ ಅವರು ಸಲ್ಲಿಸಿದ ಮನವಿಗೆ ಸ್ಪಂಧಿಸಿ ಈ ಬದಲಾವಣೆ ಮಾಡಲಾಗಿದೆ. ಯತೀಶ್ ಚಂದ್ರ ಅವರು ಕಳೆದ ಮೂರು ವರ್ಷಗಳಿಂದ ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದರು.

         ಯತೀಶ್ ಚಂದ್ರ ಪ್ರಸ್ತುತ 4 ನೇ ಬೆಟಾಲಿಯನ್, ಕೆಎಪಿ ಕಮಾಂಡರ್ ಆಗಿದ್ದಾರೆ. ಕಣ್ಣೂರಿನಲ್ಲಿ ಎಸ್.ಪಿ ಆಗಿದ್ದ ಯತೀಶ್ ಚಂದ್ರ ಅವರನ್ನು ಕಳೆದ ತಿಂಗಳು ಕೆಎಪಿ 4 ನೇ ಬೆಟಾಲಿಯನ್ ಕಮಾಂಡರ್ ಆಗಿ ನೇಮಿಸಲಾಗಿತ್ತು. 

        ಯತೀಶ್ ಚಂದ್ರ ಅವರು 2011 ರ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ವಡಕರ ಎಎಸ್ಪಿ, ಎರ್ನಾಕುಳಂ ಗ್ರಾಮೀಣ ಎಸ್ಪಿ, ನಗರ ಪೋಲೀಸ್ ಆಯುಕ್ತರು, ತ್ರಿಶೂರ್ ಗ್ರಾಮೀಣ ಎಸ್ಪಿ, ತ್ರಿಶೂರ್ ಆಯುಕ್ತರು ಮತ್ತು ಕಣ್ಣೂರು ಎಸ್ಪಿ ಮುಂತಾದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries