ಪೆರ್ಲ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನಲ್ಲಿ ನೊಂದಾಯಿತ ಬೆದ್ರಂಪಳ್ಳದಲ್ಲಿ ದೇಶಾಭಿಮಾನಿ ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆ ಇತ್ತೀಚೆಗೆ ಜರಗಿತು. ಯು.ಎ.ಇ.ಎಕ್ಸೇಂಜ್ ನ ನಿವೃತ್ತ ಅಧ್ಯಕ್ಷ ವೈ.ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅವರು ದೇಶಾಭಿಮಾನಿ ಗ್ರಂಥಾಲಯವನ್ನು ಉದ್ಘಾಟಿಸಿದರು.
ಎಣ್ಮಕಜೆ ಗ್ರಾ.ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆದ್ರಂಪಳ್ಳ ಎ.ಎಲ್.ಪಿ.ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್, ಬೆದ್ರಂಪಳ್ಳ ಅಂಗನವಾಡಿ ಅಧ್ಯಾಪಕಿ ಚೇತನಾ, ಗ್ರಂಥಪಾಲಕಿ ಚಿತ್ರಕಲಾ ಎಸ್ ಮೊದಲಾದವರು ಉಪಸ್ಥಿತರಿದ್ದರು.ಅಬ್ದುಲ್ ರಹಿಮಾನ್ ಎನ್.ಸ್ವಾಗತಿಸಿದರು. ಎಣ್ಮಕಜೆ ಲೈಬ್ರರಿ ಕೌನ್ಸಿಲ್ ನ ಕನ್ವೀನರ್ ರಾಮಕೃಷ್ಣ ರೈ ಕುದ್ವ ವಂದಿಸಿದರು.