ಕಾಸರಗೋಡು: ತ್ಯಾಜ್ಯಮುಕ್ತ ಬೇಕಲ ಯೋಜನೆಯ ಜಾಗತಿಕ ಗುಣಮಟ್ಟದ ಶೌಚಾಲಯ ಸಮುಚ್ಚಯ ಸೋಮವಾರ ಉದ್ಘಾಟನೆಗೊಂಡಿತು. ಪ್ರವಾಸೋದ್ಯಮ ಟಚಿವ ಕಡಕಂಪಳ್ಳಿ ಸುರೇಂದ್ರನ್ ಉದ್ಘಾಟಿಸಿದರು. ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್, ಬಿ.ಆರ್.ಡಿ.ಸಿ. ಪ್ರಬಂಧಕ ಯು.ಎಸ್.ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಪಿ.ಬಾಲಕಿರಣ್ ವರದಿ ವಾಚಿಸಿದರು. ಸಹಾಯಕ ನಿರ್ದೇಶಕ ಥಾಮಸ್ ಆಂಟನಿ ವಂದಿಸಿದರು.