HEALTH TIPS

ಈಶಾನ್ಯ ಲಡಾಖ್ ನಲ್ಲಿ ಭಾರತ, ಚೀನಾ ಗಡಿ ಟ್ರೂಪ್ ಗಳಿಂದ ಸೇನಾ ಸಿಬ್ಬಂದಿ ಹಿಂತೆಗೆತ: ಚೀನಾ ರಕ್ಷಣಾ ಸಚಿವಾಲಯ

      ಬೀಜಿಂಗ್: ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ನ ದಕ್ಷಿಣ ಹಾಗೂ ಉತ್ತರ ತೀರಗಳಿಂದ ಚೀನಾ, ಭಾರತ ಮುನ್ನೆಲೆ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುತ್ತಿರುವುದಾಗಿ ಚೀನಾ ರಕ್ಷಣಾ ಸಚಿವಾಲಯ ಹೇಳಿದೆ. 

       ಈ ಬಗ್ಗೆ ಮಾತನಾಡಿರುವ ಅಲ್ಲಿನ ರಕ್ಷಣ ಸಚಿವಾಲಯದ ವಕ್ತಾರರು ಫೆ.10 ರಿಂದ ಸೇನಾ ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. 

        ಚೀನಾ ಹೇಳಿಕೆಗೆ ಭಾರತದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಮಾಂಡರ್ ಮಟ್ಟದಲ್ಲಿ ಚೀನಾ-ಭಾರತದ ನಡುವೆ ನಡೆದ 9 ನೇ ಸುತ್ತಿನ ಮಾತುಕತೆ ವೇಳೆಗೆ ಸೇನಾ ಹಿಂತೆಗೆತದ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಯೋಜನೆಯ ಪ್ರಕಾರವಾಗಿ ಸೇನಾ ಹಿಂತೆಗೆತ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ ಎಂದು ಚೀನಾ ವಕ್ತಾರರು ತಿಳಿಸಿದ್ದಾರೆ. 

  ಕಳೆದ ವರ್ಷ ಮೇ ತಿಂಗಳಲ್ಲಿ ಈಶಾನ್ಯ ಲಡಾಖ್ ಪ್ರಾಂತ್ಯದಲ್ಲಿ ಚೀನಾ-ಭಾರತ ಸೈನಿಕರ ನಡುವೆ ಘರ್ಷಣೆ ಉಂಟಾಗಿತ್ತು. ಈ ಬಳಿಕ ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಜ.24 ರಂದು ಚೀನಾ-ಭಾರತ ಕಾಪ್ರ್ಸ್ ಕಮಾಂಡರ್ ಮಟ್ಟದಲ್ಲಿ 9 ನೇ ಸುತ್ತಿನ ಮಾತುಕತೆ ನಡೆದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries