ಸಮರಸ ಸಂವಾದ-ಅತಿಥಿ: ಯಕ್ಷಗಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ
0samarasasudhiಫೆಬ್ರವರಿ 12, 2021
ಕಾಸರಗೋಡು: ಕಾಸರಗೋಡಿನ ಇತಿಹಾಸ, ಭಾಷೆ, ಸಂಸ್ಕೃತಿಗಳ ಸಂವರ್ಧನೆಯಲ್ಲಿ ಯಕ್ಷಗಾನ ಕ್ಷೇತ್ರದ ಕೊಡುಗೆ ಎಂದಿಗೂ ಅಪರಿಮಿತವಾದುದು. ಈ ನಿಟ್ಟಿನಲ್ಲಿ ಪ್ರಸ್ತುತ ಸಮಸ್ತ ಕನ್ನಡ ಕಲಾಭೂಮಿಕೆಯಲ್ಲಿ ಕಾಸರಗೋಡು "ಸಿರಿಬಾಗಿಲಿನ ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ" ತನ್ನದೇ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆಯುತ್ತಿದೆ.
ಕಾಸರಗೋಡಿನ ಶ್ರೀಮಂತ ಕನ್ನಡ ಭಾಷೆ, ಸಾಂಸ್ಕೃತಿಕತೆಯ ಮೂಲ ಬೇರುಗಳನ್ನು ಪರಿಚಯಿಸಿದ
ಮಹನೀಯರಲ್ಲಿ ಸಿರಿಬಾಗಿಲು ವೆಂಕಪ್ಪಯ್ಯರೆAಬ ಮಹಾನ್ ಸಾಧಕ ಸಂತನ ಹೆಸರಲ್ಲಿ ಈ
ಪ್ರತಿಷ್ಠಾನ ಕಾರ್ಯವೆಸಗುತ್ತಿದ್ದು, ವೆಂಕಪ್ಪಯ್ಯನವರ ಸುಪುತ್ರ, ತೆಂಕುತಿಟ್ಟಿನ ಭಾಗವತ
ಶ್ರೇಷ್ಠರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಇದರ ರೂವಾರಿ. ಹಲವು-ಹತ್ತು ದಿಶೆಗಳಲ್ಲಿ
ಕಾರ್ಯಾಚರಿಸುತ್ತಿರುವ ಪ್ರತಿಷ್ಠಾನದ ಸಮಗ್ರ ಅವಲೋಕನದೊಂದಿಗೆ ರಾಮಕೃಷ್ಣ ಮಯ್ಯರೊಂದಿಗೆ
ಸಮರಸ ಸುದ್ದಿ ಇತ್ತೀಚೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ವೀಕ್ಷಕರಿಗಾಗಿ. ವೀಕ್ಷಿಸಿ, ಪ್ರೋತ್ಸಾಹಿಸಿ.