ಕಾಸರಗೋಡು: ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಿದ್ಧಪಡಿಸಿರುವ "ಇನ್ನೂ ಮುಂದಡಿ" ವೀಡಿಯೋ ಚಿತ್ರದ ಬಿಡುಗಡೆ ಸೋಮವಾರ ಜರುಗಿತು. ಕಾಞಂಗಾಡ್ ಸರಕಾರಿ ಅತಿಥಿಗೃಹದಲ್ಲಿ ಜರುಗಿದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಚಿತ್ರ ಬಿಡುಗಡೆಗೊಳಿಸಿದರು. ಹಿರಿಯ ಬರಹಗಾರ್ತಿ ವೀಣಾರಾಣಿ ಅವರಿಗೆ ಮೊದಲ ಸಿಡಿ ಹಸ್ತಾಂತರಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಿಬ್ಬಂದಿ ಟಿ.ಕೆ.ಕೃಷ್ಣನ್ ಉಪಸ್ಥಿತರಿದ್ದರು.
"ಇನ್ನೂ ಮುಂದಡಿ" ವೀಡಿಯೋ ಪ್ರದರ್ಶನ ಪ್ರಯಾಣ ಆರಂಭ
ರಾಜ್ಯ ಸರಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿದ ಅಭಿವೃದ್ಧಿ-ಕಲ್ಯಾಣ ಚಟುವಟಿಕೆಗಳನ್ನು ಜನತೆಯ ಮುಂದೆ ಪ್ರದರ್ಶಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು ಕಚೇರಿ ನಡೆಸುವ "ಇನ್ನೂ ಮುಂದಡಿ" ವೀಡಿಯೋ ಪ್ರದರ್ಶನ ಪ್ರಯಾಣ ಸೋಮವಾರ ಆರಂಭಗೊಂಡಿದೆ. ಗಡಿ
ಕಾಲಿಕಡವಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಹಸುರು ನಿಶಾನೆ ತೋರಿದರು. ಪಿಲಿಕೋಡ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಪಿ.ವಿ.ಪ್ರಸನ್ನಕುಮಾರಿ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸುದನನ್ ಎಂ., ಸಿಬ್ಬಂದಿ ಟಿ.ಕೆ.ಕೃಷ್ಣನ್ ಉಪಸ್ಥಿತರಿದ್ದರು. ತ್ರಿಕರಿಪುರ, ಕಾಞಂಗಾಡ್, ಉದುಮಾ, ಕಾಸರಗೋಡು, ಮಂಜೇಶ್ವರ ವಿಧಾನಸಭೆ ಕ್ಷೇತ್ರಗಳ 150 ಕೇಂದ್ರಗಳಲ್ಲಿ ಈ ಪ್ರದರ್ಶನ ಜರುಗಲಿದೆ.