ತಿರುವನಂತಪುರ: ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರ ಪ್ರತಿಭಟನೆಯನ್ನು ಹಿಂತೆಗೆಯಲಾಗಿದೆ. ಆರೋಗ್ಯ ಸಚಿವೆಯೊಂದಿಗೆ ವೈದ್ಯರ ಸಂಘಟನೆಗಳು ನಡೆಸಿದ ಸಂಧಾನದಲ್ಲಿ ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಲಾಯಿತು.
2016 ರಿಂದ ವೇತನ ಬಾಕಿ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅದು ವೈದ್ಯರ ಸಂಘಟನೆ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಯತ್ನಿಸಿತ್ತು. 2017 ರ ಜುಲ್ಯೆ ತಿಂಗಳಿನಿಂದ ಬಾಕಿ ಇರುವ ಬಡ್ಡಿಯನ್ನು ಶೀಘ್ರ
ವಿತರಿಸಲಾಗುವುದೆಂದು ಹಣಕಾಸು ಇಲಾಖೆಗೆ ಶಿಫಾರಸುಮಾಡಿರುವುದಾಗಿ ಸಚಿವೆ ತಿಳಿಸಿದರು.
ಈ ನಿಟ್ಟಿನಲ್ಲಿ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದಿತೆಂದು ಕಳೆದ ಕೆಲವು ದಿನಗಳಿಂದ ಸರ್ಕಾರ ಹೇಳಿತ್ತು. ಖಾಸಗಿ ವ್ಯೆದ್ಯಕೀಯ ಸೇವೆ ನಡೆಸಬಾರದು ಮತ್ತು ಅಂತವರ ವಿರುದ್ದ ಕಠಿಣ ನಿಯಂತ್ರಣಗಳನ್ನು ತರಲು ಸರ್ಕಾರ ಚಿಂತನೆ ನಡೆಸಿತ್ತು.ಈ ಮಧ್ಯೆ ಆರೋಗ್ಯ ಸಚಿವರೊಂದಿಗೆ ಇಂದು ನಡೆಸಿದ ಚರ್ಚೆಯಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳಲು ಸಂಘಟನೆ ನಿರ್ಧಾರ ಪ್ರಕಟಿಸಿತು.