ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಲಲಿತಕಲಾ ಸದನದಲ್ಲಿ ನಡೆದ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದ ವಿದ್ವಾನ್ ವಿಷ್ಣುದೇವ್ ಕೆ.ಎಸ್.ಚೆನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ವಯಲಿನ್‍ನಲ್ಲಿ ವಿದ್ವಾನ್ ಗೋಕುಲ್ ವಿ.ಎಸ್.ಅಲಂಕೋಡ್, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಕಾಮತ್ ಕೊಚ್ಚಿ, ಮೋರ್ಸಿಂಗ್‍ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಸಹಕರಿಸಿದರು.