ಕೋಲ್ಕತಾ: ಖ್ಯಾತ ಮೈಥಿಲಿ ಲೇಖಕ, ಕವಿ ರಾಮ್ ಲೋಚನ್ ಠಾಕೂರ್ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಮ್ ಲೋಚನ್ ಠಾಕೂರ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಕೋಲ್ಕತಾದ ಉತ್ತರ ಭಾಗದಲ್ಲಿರುವ ನಿವಾಸದಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಪೆÇಲೀಸರು ಭಾನುವಾರ ತಿಳಿಸಿದ್ದಾರೆ. ರಾಮ್ ಲೋಚನ್ ಠಾಕೂರ್ ಅವರು, ಕಳೆದ ಕೆಲ ವರ್ಷಗಳಿಂದ ಆಲ್ ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಠಾಕೂರ್ ಅವರು ಶುಕ್ರವಾರ ಬೆಳಿಗ್ಗೆ ಕೋಲ್ಕತಾದ ಇಟಲ್ ಗಾಚಾ ಪ್ರದೇಶದ ತಮ್ಮ ನಿವಾಸದಿಂದ ಹೊರಗೆ ಹೋಗಿದ್ದರು. ಆದರೆ ಮೂರು ದಿನಗಳಾದರೂ ಅವರು ಮನೆಗೆ ವಾಪಸ್ ಆಗಿಲ್ಲ. ನಮಗೆ ತಿಳಿದ ಎಲ್ಲ ಪ್ರದೇಶಗಳಲ್ಲೂ ಹುಡುಕಿದೆವು. ಆದರೆ ಅವರ ಪತ್ತೆಯಾಗಿಲ್ಲ. ಈ ಸಂಬಂಧ ಪೆÇಲೀಸ್ ದೂರು ನೀಡಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.ಠಾಕೂರ್ ಅನೇಕ ಬಂಗಾಳಿ ಪುಸ್ತಕಗಳನ್ನು ಮೈಥಿಲಿಗೆ ಭಾಷಾಂತರಿಸಿ ಖ್ಯಾತಿ ಗಳಿಸಿದ್ದಾರೆ.
ಅಂತೆಯೇ ಠಾಕೂರ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದು, ಅವರಿಗೆ ಮಾತನಾಡುವ ತೊಂದರೆ ಇದೆ ಎಂದು ಪೆÇಲೀಸರಿಗೆ ನೀಡಿರುವ ದೂರಿನಲ್ಲಿ ಕುಟುಂಬಸ್ಥರು ಉಲ್ಲೇಖಿಸಿದ್ದಾರೆ. ಅಲ್ ಝೈಮರ್ ಎಂಬುದು ಮೆದುಳಿನ ಖಾಯಿಲೆಯಾಗಿದ್ದು,, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ನಿಧಾನವಾಗಿ ಆಲೋಚಿಸುವ ಶಕ್ತಿ ಮತ್ತು ನೆನಪಿನ ಸಾಮಥ್ರ್ಯ ಕುಸಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.