ಕೊಚ್ಚಿ: ಕೇರಳ ಬ್ಯಾಂಕಿನ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವ ರಾಜ್ಯ ಸರ್ಕಾರದ ಅತಿ ಕಾಳಜಿಯ ಧಾವಂತಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಬ್ರೇಕ್ ಹಾಕಿದೆ. ಹೈಕೋರ್ಟ್ ನ ಈ ಕ್ರಮವನ್ನು ಸರ್ಕಾರ ಮೇಲ್ಮನವಿಯ ಮೂಲಕ ಪ್ರಶ್ನಿಸುವ ಸಾಧ್ಯತೆಯೂ ಇದೆ. ಪಿ.ಎಸ್.ಸಿ. ಪಟ್ಟಿಯಲ್ಲಿರುವ ನೌಕರರ ಅರ್ಜಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಗುಮಾಸ್ತ ಮತ್ತು ವ್ಯವಸ್ಥಾಪಕರಂತಹ ವಿವಿಧ ಹುದ್ದೆಗಳಿಗೆ 1850 ಜನರನ್ನು ಖಾಯಂಗೊಳಿಸಲು ಸರ್ಕಾರ ಸಿದ್ದತೆ ನಡೆಸಿತ್ತು.
ಹಿಂಬಾಗಿಲಿನ ನೇಮಕಾತಿಯ ವಿರುದ್ಧ ಉದ್ಯೋಗಾಕಾಂಕ್ಷಿಗಳಿಂದ ಹೆಚ್ಚುತ್ತಿರುವ ಪ್ರತಿಭಟನೆಯ ಮಧ್ಯೆ ಹೈಕೋರ್ಟ್‍ನ ತೀರ್ಪು ಮಹತ್ವ ಪಡೆದಿದೆ. ಕೇರಳ ಬ್ಯಾಂಕಿನಲ್ಲಿ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.