ಕಾಸರಗೋಡು: ನಗರದ ಸಿವಿಲ್ ಸ್ಟೇಷನ್ ನ ಲೀಗಲ್ ಮೆಟ್ರಾಲಜಿ ಸಹಾಯಕ ನಿಯಂತ್ರಣ ಅಧಿಕಾರಿ ಅವರ ಕಚೇರಿದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾನಗರ-ಸೀತಾಂಗೋಳಿ ರಸ್ತೆಯ ವಿದ್ಯಾನಗರ ಸ್ಟೇಡಿಯಂ ಜಂಕ್ಷನ್ ಸನಿಹದ ಕುಟುಂಬ ನ್ಯಾಯಾಲಯ ಚಟುವಟಿಕೆ ನಡೆಸುತ್ತಿರುವ ಕಟ್ಟಡದ ಎರಡನೇ ಅಂತಸ್ತಿಗೆ ಸ್ಥಳಾಂತರಗೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.