ಮಂಜೇಶ್ವರ: ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾಮಹೋತ್ಸವ ಸಮಾರಂಭದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ, ಮದ್ದಳೆ ಲವಕುಮಾರ್ ಆಚಾರ್ಯ ಐಲ, ಚೆಂಡೆ ಮಯೂರ ನಾಯ್ಗ ಮಾಡೂರು, ಚಕ್ರತಾಳ ಅಶ್ವಥ ಮಂಜನಾಡಿ ಭಾಗವಹಿಸಿದ್ದು ಅರ್ಥಧಾರಿಗಳಾಗಿ, ಸುಣ್ಣಂಬಳ ವಿಶ್ವೇಶ್ವರ ಭಟ್(ಕರ್ಣ), ಸದಾಶಿವ ಆಳ್ವ ತಲಪಾಡಿ(ಅರ್ಜುನ), ರಾಧಾಕೃಷ್ಣ ಕಲ್ಚಾರ್(ಕೃಷ್ಣ), ಜಬ್ಬಾರ್ ಸಮೋ ಸಂಪಾಜೆ (ಶಲ್ಯ)ಭಾಗವಹಿಸಿದ್ದರು.
ಯಶೋಧ ಮತ್ತು ಗಂಗಾಧರ ಟೈಲರ್ ಮೀಯಪದವು ಸಮಾರಂಭದ ಪ್ರಾಯೋಜಕರಾಗಿದ್ದು ತಾಳಮದ್ದಳೆ ಪೂರ್ವಭಾವಿ ಜರಗಿದ ಸಮಾರಂಭದಲ್ಲಿ ಗಂಗಾಧರ ಟೈಲರ್ ಅವರ ವೃತ್ತಿ ಗುರುಗಳೂ ಹಿರಿಯ ಸಮಾಜ ಸೇವಕರೂ ಆಗಿರುವ ದಾಮೋದರ ಟೈಲರ್ ಗುಡ್ಡೆಕೇರಿ ಮಂಜೇಶ್ವರ ದಂಪತಿಗಳನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು.