ತಿರುವನಂತಪುರ: ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರಿಗೆ ಇಂದು ಕೋವಿಡ್ ದೃಢಪಡಿಸಲಾಗಿದ್ದು ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ತಾನು ಕೋವಿಡ್ ಬಾಧಿತನಾಗಿರುವೆ ಎಂದು ಸಚಿವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ದೈಹಿಕ ಅಸ್ವಸ್ಥತೆಯ ಕಾರಣ ನಡೆಸಿದ ಪರೀಕ್ಷೆಯಲ್ಲಿ ವೈರಸ್ ದೃಢಪಟ್ಟಿದೆ.
'ನನ್ನ ದೈಹಿಕ ಅಸ್ವಸ್ಥತೆಯ ನಂತರ ಇಂದು ಬೆಳಿಗ್ಗೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ದೃಢ ಪಟ್ಟಿದೆ ಎಂದು ಸಚಿವರು ಬರೆದಿದ್ದಾರೆ. ತಿರುವನಂತಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿರುವೆ ಎಂದು ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.