ತಿರುವನಂತಪುರ: ಕೋವಿಡ್ ಸೋಂಕು ಹರಡಿದ್ದರಿಂದ ಮುಚ್ಚಲ್ಪಟ್ಟಿದ್ದ ಕೇರಳದ ಕಾಲೇಜುಗಳು ಮತ್ತೆ ಸಕ್ರಿಯಗೊಳ್ಳಲಿದೆ. ರಾಜ್ಯದ ಪ್ರಥಮ ವರ್ಷ ಪದವಿ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳು ಸೋಮವಾರದಿಂದ ಪ್ರಾರಂಭವಾಗಲಿವೆ.
ಫೆ. 27 ರವರೆಗೆ ತರಗತಿಗಳಿರಲಿವೆ. ಎರಡನೇ ವರ್ಷದ ಪದವಿ ತರಗತಿಗಳು ಮಾರ್ಚ್ 1 ರಿಂದ 16 ರವರೆಗೆ ನಡೆಯಲಿದೆ. ಮೂರನೇ ವರ್ಷದ ತರಗತಿಗಳು ಮಾರ್ಚ್ 17 ರಿಂದ 30 ರವರೆಗೆ ನಡೆಯಲಿದೆ. ಶಿಫ್ಟ್ ಆಧಾರದ ಮೇಲೆ ತರಗತಿಗಳನ್ನು ಆಯೋಜಿಸಲು ಆಯಾ ಕಾಲೇಜುಗಳು ಸ್ವತಂತ್ರವಾಗಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.