ನವದೆಹಲಿ: ರೈತರ ಪ್ರತಿಭಟನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ವೈರಲ್ ಆಗಿರುವ ಟೂಲ್ ಕಿಟ್ ದಾಖಲೆಗಳು ಎಲ್ಲಿಂದ ಬಂದವು, ಅದರ ಐಪಿ ವಿಳಾಸ (ಇಂಟರ್ನೆಟ್ ಪೆÇ್ರಟೊಕಾಲ್)ವೇನು ಎಂದು ಗೂಗಲ್ ಗೆ ಪತ್ರ ಬರೆಯಲು ದೆಹಲಿ ಪೆÇಲೀಸರು ನಿರ್ಧರಿಸಿದ್ದಾರೆ.
ಗೂಗಲ್ ದಾಖಲೆಯಲ್ಲಿ ಹಂಚಿಕೊಂಡಿರುವ ಟೂಲ್ ಕಿಟ್ ಡಾಕ್ಯುಮೆಂಟ್ ಗಳ ಮೂಲ ಲೇಖಕರು, ಕರ್ತೃ ಯಾರು, ಅದು ಎಲ್ಲಿಂದ ಹುಟ್ಟಿಕೊಂಡಿತು ಎಂದು ಗುರುತಿಸಲು ತನಿಖೆ ನಡೆಸಲು ಪೆÇಲೀಸ್ ಮೂಲಗಳು ಬಯಸಿವೆ.
ಈ ಟೂಲ್ ಕಿಟ್ ದಾಖಲೆಗಳು ಎಲ್ಲಿ ಸಿಕ್ಕಿದವು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿದ್ದು ಹೇಗೆ ಎಂದು ಐಪಿ ವಿಳಾಸ ತಿಳಿಯಲು ಗೂಗಲ್ ಗೆ ಬರೆಯುವುದಾಗಿ ದೆಹಲಿ ಪೆÇಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪೆÇಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್, ಟೂಲ್ ಕಿಟ್ ದಾಖಲೆಗಳನ್ನು ತಯಾರಿಸಿದವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಎಫ್.ಐ.ಆರ್ ನಲ್ಲಿ ಯಾರ ಹೆಸರನ್ನೂ ದಾಖಲಿಸಿಲ್ಲ ಎಂದಿದ್ದಾರೆ. ನಾವು ಯಾರ ಹೆಸರನ್ನೂ ಎಫ್.ಐ.ಆರ್ ನಲ್ಲಿ ದಾಖಲಿಸಿಲ್ಲ, ಟೂಲ್ ಕಿಟ್ ತಯಾರಿಸಿದವರ ವಿರುದ್ಧ ಮಾತ್ರ ನಮ್ಮ ಆಕ್ಷೇಪವಿದ್ದು ಆ ಬಗ್ಗೆ ವಿಚಾರಣೆ ನಡೆಯಲಿದೆ. ದೆಹಲಿ ಪೆÇಲೀಸರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದರು. ಭಾರತ ಸರ್ಕಾರದ ಬಗ್ಗೆ ವಿರುದ್ಧವಾದ ವಿಷಯಗಳನ್ನು ಹೊಂದಿರುವ ಸುಮಾರು 300 ಖಾತೆಗಳನ್ನು ನಾವು ಗುರುತಿಸಿದ್ದೇವೆ. 'ಟೂಲ್‍ಕಿಟ್' ಖಾತೆಯನ್ನು ಖಲಿಸ್ತಾನಿಗಳ ಗುಂಪು ನಡೆಸುತ್ತಿದೆ. ಗಣರಾಜ್ಯೋತ್ಸವದ ನಂತರ ಡಿಜಿಟಲ್ ಸ್ಟ್ರೈಕ್ ನಡೆಸಲು ಅವರು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ ಎಂದರು.
ಟೂಲ್ ಕಿಟ್ ಕಾಪಿಕ್ಯಾಟ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಾವು ಆ ಖಾತೆಯ ಲೇಖಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದೇವೆ. ಪ್ರಕರಣವನ್ನು ಸೈಬರ್ ಸೆಲ್‍ಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಕಳೆದ ಬುಧವಾರ ಖ್ಯಾತ ಅಂತಾರಾಷ್ಟ್ರೀಯ ಪರಿಸರವಾದಿ ಗ್ರೆಟಾ ಥನ್ಬರ್ಗ್ ಟೂಲ್ ಕಿಟ್ ನ್ನು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ನಂತರ ವಿವಾದವೆದ್ದ ಬಳಿಕ ಟ್ವೀಟ್ ನಲ್ಲಿ ಹಾಕಿದ್ದ ಲಿಂಕ್ ನ್ನು ಅಳಿಸಿದ್ದರು. ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಗ್ರೆಟಾ ಬೆಂಬಲ ಸೂಚಿಸಿದ್ದಾರೆ.