ತಿರುವನಂತಪುರ: ಶಾಲೆಗಳಲ್ಲಿ ಕೋವಿಡ್ ಹರಡುವಿಕೆಯ ಮೇಲ್ವಿಚಾರಣೆಯನ್ನು ಶಿಕ್ಷಣ ಇಲಾಖೆ ಬಿಗಿಗೊಳಿಸಿದೆ. ವಿದ್ಯಾರ್ಥಿಗಳ ನಡುವಿನ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಮುಖ್ಯ ಶಿಕ್ಷಕರು ಪ್ರತಿದಿನವೂ ಡಿಡಿಇಗೆ ವರದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ.
ಡಿಇಒಗಳು ಮತ್ತು ಪ್ರಾದೇಶಿಕ ಉಪ ನಿರ್ದೇಶಕರು ಶಾಲೆಗಳನ್ನು ಪರಿಶೀಲಿಸಬೇಕು. ಶಿಕ್ಷಕರು ಶಾಲೆಗಳ ಪಕ್ಕದಲ್ಲಿರುವ ಬಸ್ ನಿಲ್ದಾಣಗಳ ಮೇಲೆ ನಿಗಾ ಇಡಬೇಕು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೊರಡಿಸಲಾದ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಕೋವಿಡ್ ಹರಡುವಿಕೆಯು ತೀವ್ರಗೊಳ್ಳುತ್ತಿದ್ದಂತೆ, ಸಚಿವಾಲಯ(ಸೆಕ್ರಟರಿಯೇಟ್)ಕ್ಕೂ ನಿರ್ಬಂಧ ಹೇರಲಾಯಿತು. ಇಂದಿನಿಂದ, ಹಣಕಾಸು ಇಲಾಖೆಯಲ್ಲಿ ಶೇ.50 ಪ್ರತಿಶತದಷ್ಟು ನೌಕರರಿಗೆ ಸೋಂಕು ಬಾಧಿಸಿದೆ. ಆದರೆ ಜಂಟಿ ಕಾರ್ಯದರ್ಶಿ ವರೆಗೆ ಇರುವವರು ಪ್ರತಿದಿನ ಹಾಜರಿರಬೇಕು. ಮಾರ್ಚ್ ತಿಂಗಳಲ್ಲಿ ಸೆಕ್ರಟರಿಯೇಟ್ ನಲ್ಲಿ ಅಸೋಸಿಯೇಶನ್ ಗೆ ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸುವಂತೆ ಪ್ರತಿಪಕ್ಷ ಗುಂಪುಗಳು ಕರೆ ನೀಡಿವೆ. ಈ ಹಿಂದೆ ನಡೆದಿದ್ದ ಕ್ಯಾಂಟೀನ್ ಚುನಾವಣೆಯಿಂದ ಕೋವಿಡ್ ವಿಸ್ತರಣೆಗೆ ಕಾರಣವಾಗಿತ್ತು ಎನ್ನಲಾಗಿದೆ.