ತಿರುವನಂತಪುರ: ಕೋವಿಡ್ ಅವಧಿಯಲ್ಲಿನ ಆರ್ಥಿಕ ಬಿಕ್ಕಟ್ಟಿನ ಕಾರಣ ಹಿಡಿದಿರಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ಸಂಬಳವನ್ನು ಹಂತಾನುಹಂತದಲ್ಲಿ ಪಾವತಿಸಲು ಮಂತ್ರಿಮಂಡಲ ನಿರ್ಣಯಿಸಿದೆ. ಹಿಡಿದಿರಿಸಲಾಗಿದ್ದ ಇಂದು ತಿಂಗಳ ಸಂಬಳವನ್ನು ಮುಂದಿನ ಏಪ್ರಿಲ್‍ನಿಂದ ಐದು ಹಂತಗಳಲ್ಲಿ ಪಾವತಿಸಲು ನಿರ್ಧರಿಸಲಾಗಿದೆ.
ರಾಜ್ಯದ 5.5 ಲಕ್ಷ ಉದ್ಯೋಗಿಗಳಿಗೆ ಸುಮಾರು 2200 ಕೋಟಿ ರೂ.ಗಳಷ್ಟು ಹಿಡಿದಿಟ್ಟ ವೇತನವನ್ನು ಏಪ್ರಿಲ್ ತಿಂಗಳ ವೇತನದೊಂದಿಗೆ ಸೇರಿಸಿ ಒಂದಷ್ಟು ನೀಡಲಾಗುವುದು. ಬಳಿಕ ಪ್ರತಿ ತಿಂಗಳೂ ನಿಗದಿತ ಮೊತ್ತ ಪೂರ್ಣಗೊಳ್ಳುವವರೆಗೆ ಕಂತಿನ ರೂಪದಲ್ಲಿ ಪಾವತಿಸಲಾಗುತ್ತದೆ. ಈ ಮೊತ್ತ ಪಾವತಿಸಲು ತಿಂಗಳಿಗೆ 450 ಕೋಟಿ ರೂ.ಗಳನ್ನು ಸೇರಿಸಲಾಗಿದೆ. ಮುಂದೂಡಲ್ಪಟ್ಟ ಸಂಬಳವನ್ನು ಐದು ಕಂತುಗಳಲ್ಲಿ ಭವಿಷ್ಯ ನಿಧಿಗೆ ಜಮಾ ಮಾಡಲಾಗುತ್ತದೆ. ಈ ಮೂಲಕ ದಿಕ್ಕೆಟ್ಟು ಕಂಗಾಲಾಗಿರುವ ಸರ್ಕಾರಿ ನೌಕರರಿಗೆ ಜೀವಕಳೆ ಬಂದಂತಾಗಿದೆ.