"ಪ್ರಶಸ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತೇನೆ. ಹೀಗಿದ್ದೂ, ಇಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ. ನಾನು ಭಾರತೀಯನಾಗಿದ್ದು, ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗಿದ್ದು ನನ್ನ ಅದೃಷ್ಟ ಎಂದು ನಾನು ಅಂದುಕೊಂಡಿದ್ದೇನೆ," ಎಂದು ರತನ್ ಟಾಟಾ ಟ್ಟೀಟ್ ಮಾಡಿದ್ದಾರೆ.
#BharatRatnaForRatanTata (ರತನ್ ಟಾಟಾಗೆ ಭಾರತ ರತ್ನ) ಹ್ಯಾಷ್ ಟ್ಯಾಗ್ ಶುಕ್ರವಾರ ಟ್ರೆಂಡ್ ಆಗಿತ್ತು. ಶನಿವಾರವೂ ಟ್ರೆಂಡ್ ಮುಂದುವರಿದಿದ್ದು ಲಕ್ಷಾಂತರ ಜನರು ಟಾಟಾ ಮುಖ್ಯಸ್ಥರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತನ್ನ ಉದ್ಯಮ ಮತ್ತು ಸಮಾಜಮುಖಿ ಕಾರ್ಯಗಳಿಗೆ ಟಾಟಾ ಸಂಸ್ಥೆ ಹೆಸರುವಾಸಿಯಾಗಿದ್ದು, ಉಪ್ಪಿನಿಂದ ಉಕ್ಕಿನವರೆಗಿನ ಸಾಮ್ರಾಜ್ಯವನ್ನು ಮುನ್ನಡೆಸುವ ಟಾಟಾ ಸಂಸ್ಥೆ ಭಾರತೀಯರ ಹೆಮ್ಮೆ ಎಂಬ ಅಭಿಪ್ರಾಯ ದೇಶದ ಜನಮಾನಸದಲ್ಲಿದೆ.
1937ರಲ್ಲಿ ಈಗಿನ ಮುಂಬಯಿನಲ್ಲಿ ಜನಿಸಿದ ರತನ್ ಟಾಟಾ, ಟಾಟಾ ಸಮೂಹದ ಹಲವು ಕಂಪನಿಗಳನ್ನು ಮುನ್ನಡೆಸಿದ್ದಾರೆ. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಿಸಿಎಸ್, ಟಾಟಾ ಪವರ್, ಟಾಟಾ ಗ್ಲೋಬಲ್ ಬೇವರೇಜಸ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್, ಟಾಟಾ ಟೆಲಿಸರ್ವೀಸಸ್ ಇದರಲ್ಲಿ ಪ್ರಮುಖವಾದವು. ಸದ್ಯ ಅವರು ಟಾಟಾ ಗ್ರೂಪ್‌ನ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.