ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯೆನಪೋಯ ಗ್ರೂಪ್ ಸಂಸ್ಥೆಯ ಮಾಲೀಕ ಅಬ್ದುಲ್ ಕುಂಞ ಹಾಗೂ ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಅವರ ಕಚೇರಿ ಮತ್ತು ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ.
ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆದಿದ್ದೂ, ಏಳು ಮಂದಿ ಅಧಿಕಾರಿಗಳ ತಂಡದಿಂದ ಐಟಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.