ಸಮರಸ ಚಿತ್ರ ಸುದ್ದಿ:ಮಂಜೇಶ್ವರ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ರ ನವೆಂಬರ್ ತಿಂಗಳಲ್ಲಿ ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಮಂಗಳೂರು ಸನಾತನ ನಾಟ್ಯಾಲಯದ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್‍ರವರ ಶಿಷ್ಯೆ ಕುಮಾರಿ ಶ್ರಾವ್ಯಾ ಶೇ.85 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಈಕೆ ಛಾಯಾಗ್ರಾಹಕ ನಾರಾಯಣ ಬಾಳ್ಯೂರು ಮತ್ತು ಶುಭಾ ದಂಪತಿ ಸುಪುತ್ರಿ.