HEALTH TIPS

ಭಜನೆಯಿಂದ ಸಾಮಾಜಿಕ ಐಕ್ಯತೆ ಸಾಧ್ಯ-ಎಡನೀರು ಶ್ರೀ-ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾಮಹೋತ್ಸವ ಸಮಾರಂಭದಲ್ಲಿ ಅಭಿಮತ

        

         ಮಂಜೇಶ್ವರ: ಭಜನೆಯಿಂದ ಸಾಮಾಜಿಕ ಐಕ್ಯತೆ ಸಾಧ್ಯ, ಭಜನಾಮಂದಿರಗಳು ಊರಿನ ಏಕತೆಯ ಸಂಕೇತವಾಗಿ ಬೆಳಗುತ್ತಿದೆ, ಯಾವುದೇ ಜಾತಿ ಭೇದವಿಲ್ಲದೆ ಸಮಾನತೆ ಸಾಮರಸ್ಯದ ಪ್ರತೀಕವಾಗಿ ಭಜನಾ ಕಾರ್ಯಗಳು ನಾಡಿನಾಧ್ಯಂತ ನಡೆಯುತ್ತಿದೆ. ಸಮಾಜದ ವಿಭಜನೆಯನ್ನು ತಡೆಯುವಲ್ಲಿ ಭಜನೆ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಸರಳ ಮಾರ್ಗ, ಈ ಹಿಂದೆ ಬಾಳಿಬೆಳಗಿದ ಸಾಧುಸಂತರು ತಮ್ಮ ಬದುಕಿನಿಂದ ಇದನ್ನು ಸಾಧಿಸಿ ತೋರಿದ್ದಾರೆ ನಾವೂ ಅದೇ ಮಾರ್ಗದಲ್ಲಿ ನಡೆಯೋಣ ಎಂದು  ಶ್ರೀ ಮದ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ನುಡಿದರು.

           ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾಮಹೋತ್ಸವ ಸಮಾರಂಭದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿ ಮಾತನಾಡುತ್ತಿದ್ದರು.

          ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ ಯನ್.ಪಿ.ಸುಬ್ರಾಯ ನಂದೋಡಿ ಧಾರ್ಮಿಕ ಭಾಷಣ ನೀಡಿ ಮಾತನಾಡಿ ಸರ್ವಧರ್ಮ ಸಮಭಾವ ಹಿಂದುಗಳ ಮಂತ್ರ, ಅಯ್ಯಪ್ಪ ದೇವರು ಸಾಮರಸ್ಯಕ್ಕೆ ಒಳ್ಳೆಯ ಹೆಸರು. ಜಾತಿ ಭೇದವಿಲ್ಲದೆ, ಬಡವ ಬಲ್ಲಿದ ಭೇದವಿಲ್ಲದೆ ಎಲ್ಲರೂ ಸಮಾನತೆಯಿಂದ ಶಬರಿಮಲೆ ಯಾತ್ರೆ ಗೈಯುತ್ತಾರೆ, ಭಜನಾಮಂದಿರಗಳು ಸಾಮಾಜಿಕ ಪರಿವರ್ತನೆಯಲ್ಲಿ ನಾಯಕತ್ವ ವಹಿಸಬೇಕು. ಸಂಸ್ಕಾರ ಕೇಂದ್ರಗಳಾಗಿ ಬದಲಾಗಬೇಕು. ಬಡವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ಕೇಂದ್ರವಾಗಿ, ಸಮಾಜದ ಬಡವ ಶೋಶಿತರಿಗೆ ಸಹಾಯನೀಡುವ ಕೇಂದ್ರವಾಗಿ ಬದಲಾಗಬೇಕಿದೆ ಎಂದು ಕರೆನೀಡಿದರು. 


      ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಂಜಿತ್ ಪಿ ಹೊಸಕಟ್ಟೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವೇದಮೂರ್ತಿ ರಾಮ ಭಟ್ ಬೋಳಂತ ಕೋಡಿ ಗೌರವ ಉಪಸ್ಥಿತರಿದ್ದು  ಧಾರ್ಮಿಕ ಸಂದೇಶ ನೀಡಿದರು. ನಾಡಿನ ಹಿರಿಯರಾದ ದಾಸಣ್ಣ ಆಳ್ವ ಕುಳೂರುಬೀಡು, ಸಂಜೀವ ಶೆಟ್ಟಿ ಕುಂಜತ್ತೂರು ಮಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

       ಅಯ್ಯಪ್ಪ ಸೇವಾಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಪ್ರಸ್ತಾವಿಕ ನುಡಿಗಳನ್ನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಆರ್ ಎಂ, ಮಂದಿರದ ಗುರುಸ್ವಾಮಿ ರಂಜಿತ್ ಕುಮಾರ್ ಕೋಡಿ ಉಪಸ್ಥಿತರಿದ್ದರು.

      ಪ್ರಥಮ್ ಶೆಟ್ಟಿ ತಲೆಕಳ ಪ್ರಾರ್ಥನೆ ಗೈದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ತಿಮ್ಮಪ್ಪ ಮೈತಾಳ್ ಸ್ವಾಗತಿಸಿ, ರಾಜಾರಾಮ ರಾವ್ ಮೀಯಪದವು ಹಾಗೂ ಅರವಿಂದಾಕ್ಷ ಭಂಡಾರಿ ನಿರೂಪಿಸಿ ಶ್ರೀನಿವಾಸ ಪಂಚಮಿ ಮೀಯಪದವು ವಂದಿಸಿದರು.

        ಸಮಾರಂಭದ ಮೊದಲು ಅಯ್ಯಪ್ಪದೇವರ ಸ್ವರ್ಣ ಲೇಪಿತ ಚಿತ್ರದೊಂದಿಗೆ ಚಿಗುರುಪಾದೆ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ, ಹಾಗೂ ಪುಟಾಣಿಗಳಿಂದ ಕುಣಿತ ಭಜನೆ ಜರಗಿತು. 



                           


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries