ಕೋಝಿಕ್ಕೋಡ್: ಕಾಂಗ್ರೆಸ್ ಮುಖಂಡ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದರು. ರಾಹುಲ್ ಗಾಂಧಿ ಕರಿಪುರಕ್ಕೆ ನಿನ್ನೆ ಬಂದಿಳಿದರು. ಐಶ್ವರ್ಯ ಕೇರಳ ಯಾತ್ರೆ ಸಮಾರೋಪ ಸಮಾರಂಭ ಮತ್ತು ವಯನಾಡ್ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಲು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿರುವರು.
ರಾಹುಲ್ ಗಾಂಧಿ ಸೋಮವಾರ ಮತ್ತು ಮಂಗಳವಾರ ಕೇರಳದಲ್ಲಿ ಇರಲಿದ್ದಾರೆ. ಕೃಷಿ ಕಾನೂನಿನ ವಿರುದ್ಧದ ಹೋರಾಟಗಳಿಗೆ ಐಕಮತ್ಯವನ್ನು ಘೋಷಿಸುವ ರಾಹುಲ್ ಗಾಂಧಿ ವಯನಾಡಿನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ ಇಂದು(ಸೋಮವಾರ) ಬೆಳಿಗ್ಗೆ 10.30 ಕ್ಕೆ ತ್ರಿಕ್ಕೈಪಟ್ಟ ಮುಕ್ಕಮಂಕುನ್ನಿಂದ ಪ್ರಾರಂಭವಾಗಲಿದೆ. ರ್ಯಾಲಿ ಮುಟ್ಟಿಲ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿ ನಡೆಯಲಿದೆ. ನಂತರ ರಾಹುಲ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.