ಕಣ್ಣೂರು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧಿಯಾಗಿ ಜ್ಯೆಲಲ್ಲಿರುವ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಗೆ ಎದುರಾದ ಎಲ್ಲಾ ಪ್ರಕರಣಗಳಲ್ಲೂ ಜಾಮೀನು ನೀಡಲಾಗಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕಮರುದ್ದೀನ್ ಅವರನ್ನು ಕಳೆದ 93 ದಿನಗಳಿಂದ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ರಿಮಾಂಡ್ ಮಾಡಲಾಗಿತ್ತು. ಎಲ್ಲ ಪ್ರಕರಣಗಳಲ್ಲೂ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಹೊಸದುರ್ಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಬಾಕಿ ಇದ್ದ ಆರು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ. ಇದು ಕಮರುದ್ದೀನ್ ಜೈಲಿನಿಂದ ಬಿಡುಗಡೆಯಾಗಲು ದಾರಿಮಾಡಿಕೊಟ್ಟಿತು. ಚಂದೇರಾ, ಕಾಸರಗೋಡು ಮತ್ತು ಪಯ್ಯನ್ನೂರು ಪೊಲೀಸ್ ಠಾಣೆಗಳ ಆವರಣಕ್ಕೆ ಪ್ರವೇಶಿಸಬಾರದು ಎಂಬ ಷರತ್ತಿನ ಮೇರೆಗೆ ಜಾಮೀನು ನೀಡಲಾಗಿದೆ.