ಕಾಸರಗೋಡು: ಚಂದ್ರಗಿರಿ ನದಿಯಲ್ಲಿ ನಿರ್ಮಿಸಲಾದ ಬಾವಿಕ್ಕರೆ ರೆಗ್ಯುಲೇಟರ್ ಯೋಜನೆ ಭಾನುವಾರ ಲೋಕಾರ್ಪಣೆಗೊಂಡಿದೆ. ನೀರಾವರಿ ಸಚಿವ ಕೆ.ಕೃಷ್ಣನ್ ಕುಟ್ಟಿ ಉದ್ಘಾಟಿಸಿದರು.
ಅನೇಕ ವರ್ಷಗಳ ಕಾಯುವಿಕೆಯ ನಂತರ ಈ ಯೋಜನೆ ನನಸಾಗಿದೆ. ಕಾಸರಗೋಡು ನಗರಸಭೆ, ಮುಳೀಯಾರು, ಚೆಮ್ನಾಡ್, ಮೊಗ್ರಾಲ್ ಪುತ್ತೂರು, ಮಧೂರು, ಚೆಂಗಳ ಗ್ರಾಮ ಪಂಚಾಯತ್ ಗಳ ತೀವ್ರ ಕುಡಿಯುವ ನೀರಿನ ಬರ ಪಿಹಾರಕ್ಕೆ ಮತ್ತು ಕಾಸರಗೋಡು ತಾಲೂಕಿನ ಮುಳಿಯಾರು, ಬೇಡಡ್ಕ, ಪಳ್ಳಿಕ್ಕರೆ, ಚೆಮ್ನಾಡ್ ಗ್ರಾಮಪಂಚಾಯತ್ ಗಳ ಕೃಷಿವಲಯಕ್ಕೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ಸ್ಥಳೀಯ ನಿವಾಸಿಗಳು ವರ್ಷದಲ್ಲಿ 2 ತಿಂಗಳು ಉಪ್ಪುನೀರು ಕುಡಿಯಬೇಕಾದ ದುಸ್ಥಿತಿಯ ಪರಿಹಾರಕ್ಕೆ ಈ ಯೋಜನೆಯ ಮೂಲಕ ಸಾಧ್ಯವಾಗಲಿದೆ. ಪಯಸ್ವಿನಿ ನದಿಯ ಮತ್ತು ಕರಿಚ್ಚೇರಿಯ ನದಿಯ ಸಂಗಮ ಸ್ಥಾನದಲ್ಲಿ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಲಾದ 120 ಮೀಟರ್ ಉದ್ದ, 4 ಮೀಟರ್ ಎತ್ತರ ವಿರುವ ರೆಗ್ಯುಲೇಟರ್ 250 ಕೋಟಿ ಲೀ. ನೀರು ಸಂಗ್ರಹಿಸುವ ಸಾಮಥ್ರ್ಯ ಹೊಂದಿದೆ. 35 ಕೋಟಿ ರೂ. ವೆಚ್ಚದಲ್ಲಿ 27 ತಿಂಗಳ ಅವಧಿಯಲ್ಲಿ ಈ ಯೋಜನೆ ನಿರ್ಮಾಣಗೊಂಡಿದೆ.
ಕಂದಾಯ ಸಚಿವ ಇ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಶಿಲಾಫಲಕ ಅನಾವರಣಗೊಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ್ವಆನವಾಝ್ ಪಾದೂರು, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ ಮೊದಲಾದವರು ಉಪಸ್ಥಿತರಿದ್ದರು.