ಕಾಸರಗೋಡು: ಡಿವೈಎಸ್‍ಪಿ, ಹರಿಶ್ಚಂದ್ರ ನಾಯ್ಕ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಪಂಚಾಯಿತಿ ಕರಿಂಬಿಲ ನಿವಾಸಿಯಾಗಿರುವ ಇವರು, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿ, ಬಳಿಕ ಕೇರಳದಲ್ಲಿ ಮರಾಟಿ ಮೀಸಲಾತಿಯನ್ವಯ ಕೇರಳ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು. ಎಸ್.ಐ, ಸರ್ಕಲ್ ಇನ್ಸ್‍ಪೆಕ್ಟರ್ ಹಾಗೂ ಡಿವೈಎಸ್‍ಪಿಯಾಗಿ ಬಡ್ತಿ ಪಡೆದಿರುವ ಇವರು, ಪ್ರಸಕ್ತ ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವಾ ತತ್ಪರತೆಗೆ ಒಲಿದ ರಾಷ್ಟ್ರಪತಿ ಪ್ರಶಸ್ತಿಯ ಸಂಭ್ರಮದಲ್ಲಿ ಸಮರಸ ಸುದ್ದಿ ನಡೆಸಿದ ಸಂದರ್ಶನದ ಆಯ್ದಭಾಗ ವೀಕ್ಷಕರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
ವೀಕ್ಷಿಸಿ,ಹಂಚಿ,ಅಭಿಪ್ರಾಯ ವ್ಯಕ್ತಪಡಿಸಿ.