HEALTH TIPS

ಲವ್‌ ಜಿಹಾದ್‌ ತಡೆ ಕಾನೂನು: ವಿಚಾರಣೆಗೆ 'ಸುಪ್ರೀಂ' ನಕಾರ

        ನವದೆಹಲಿ: 'ಲವ್‌ ಜಿಹಾದ್‌' ಕಾನೂನಿಗೆ ಸಂಬಂಧಪಟ್ಟಂತೆ ಹೊಸ ಅರ್ಜಿಗಳ ವಿಚಾರಣೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

        ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ 'ಲವ್ ಜಿಹಾದ್' ಎಂದು ಆರೋಪಿಸಲಾದ ಪ್ರಕರಣಗಳ ಪರಿಶೀಲನೆ ಕೋರಿ ಸಲ್ಲಿಕೆಯಾದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸ್ವಯಂ ಸೇವಾ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.

      ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಬಾಲಸುಬ್ರಹ್ಮಣಿಯನ್ ಅವರಿದ್ದ ಪೀಠವು, ಪ್ರಕರಣ ಸಂಬಂಧ, ಹೈಕೋರ್ಟ್‌ ಮೊರೆ ಹೋಗುವಂತೆ ತಿಳಿಸಿದೆ.

       ಈ ಕಾನೂನು ಸಾರ್ವಜನಿಕರ ಮೂಲಭೂತ ಹಕ್ಕು ಮೊಟಕುಗೊಳಿಸುತ್ತದೆ. ಇದು ಸಮಾಜ ವಿರೋಧಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries