HEALTH TIPS

ಅಂತರರಾಜ್ಯ ಪ್ರಯಾಣ ನಿಷೇಧಿಸಿಲ್ಲ, ಕೋವಿಡ್ ನೆಗೆಟಿವ್ ವರದಿ ಮಾತ್ರ ಕಡ್ಡಾಯ: ಸುಧಾಕರ್ ಸ್ಪಷ್ಟನೆ

      ಬೆಂಗಳೂರು: ಕರ್ನಾಟಕ ಮತ್ತು ಕೇರಳ ನಡುವಿನ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ ಇಲ್ಲಿಗೆ ಬರುವವರು ಕಡ್ಡಾಯವಾಗಿ 72 ಗಂಟೆಗೂ ಹಳೆಯದಲ್ಲದ ಕೋವಿಡ್ ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

       ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌, ಹೋಂ ಸ್ಟೇಗಳು ಸೇರಿದಂತೆ ವಿವಿಧೆಡೆ ಕೇರಳದಿಂದ ಹಿಂದಿರುಗುವವರಿಗೆ ಪ್ರವೇಶ ನೀಡುವ ಮುನ್ನ ಕೋವಿಡ್‌ ನೆಗೆಟಿವ್ ವರದಿಯನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದ್ದಲ್ಲಿ ಸಮಸ್ಯೆಯಾಗದು ಎಂದು ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿ ಸಹಿತ ಟ್ವೀಟ್ ಮಾಡಿದ್ದಾರೆ.

      ವಯನಾಡ್ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಗಡಿಯಲ್ಲಿ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು, ಇಲ್ಲದಿದ್ದರೇ  ಎರಡು ರಾಜ್ಯಗಳ ಸರಕು ಸಾಗಟಕ್ಕೆ ತೊಂದರೆ ಉಂಟಾಗಲಿದೆ. ಉತ್ತರ ಕೇರಳವು ತರಕಾರಿಗಳಿಗೆ ಕರ್ನಾಟಕವನ್ನು ಅವಲಂಬಿಸಿದ್ದರೆ, ಕರ್ನಾಟಕದ ಗಡಿ ಪ್ರದೇಶಗಳಿಂದ ಕೃಷಿ ಕಾರ್ಮಿಕರು ನಿಯಮಿತವಾಗಿ ವಯನಾಡದಲ್ಲಿರುವ ಕೇರಳದ ತೋಟಗಳಿಗೆ ಸಂಚರಿಸುತ್ತಾರೆ ಎಂದು ತಿಳಿಸಿದ್ದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

     ಕಾಸರಗೋಡು, ಕಣ್ಣೂರು ಮತ್ತು ವಯನಾಡ್ ಗಡಿಗಳಲ್ಲಿ ಸೋಮವಾರ ಉದ್ವಿಘ್ನ ವಾತವರಣವಿತ್ತು, ಕೇರಳದ ಜನರು ಕರ್ನಾಟಕದಿಂದ ವಯನಾಡ್ ಜಿಲ್ಲೆಯ ಬಾವಲಿ ಗಡಿ ಚೆಕ್ ಪೋಸ್ಟ್ ಮೂಲಕ ಒಳಬರುವ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕೇರಳದಿಂದ ಸಂಚಾರವನ್ನು ನಿಲ್ಲಿಸಲು ಅಂತರ್-ರಾಜ್ಯ ರಸ್ತೆಗಳಲ್ಲಿ ಮಣ್ಣನ್ನು ತಂದು ಸುರಿದಿದ್ದಾರೆ ಎಂದು ಆರೋಪಿಸಲಾಗಿತ್ತು.

     ಕೋವಿಡ್ ಇಲ್ಲದ ರೋಗಿಗಳನ್ನು ಕಾಸರಗೋಡಿನಿಂದ ದಕ್ಷಿಣ ಕನ್ನಡಕ್ಕೆ ಕರೆದೊಯ್ಯುವ ಆ್ಯಂಬುಲೆನ್ಸ್ ಗಳಿಗೂ ಪ್ರವೇಷ ನಿರಾಕರಿಸಲಾಗಿತ್ತು. ಕಳೆದ ವರ್ಷವೂ ನಾವು ಇದೇ ಪರಿಸ್ಥಿತಿ ಎದುರಿಸಿದ್ದೆವು, ಅದರ ನೋವು ಏನು ಎಂಬುದು ನಮಗೆ ತಿಳಿದಿದೆ ಎಂದು ಕಾಸಗರೋಡಿನ ಖಾಸಗಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಮನೋಜ್ ನಾಯರ್ ತಿಳಿಸಿದ್ದಾರೆ. ನಾವು ಗಡಿಯಲ್ಲಿ ಯಾವುದೇ ವಾಹನಗಳನ್ನು ತಡೆದಿಲ್ಲ, ಬದಲಾಗಿ ಆರ್ ಟಿ-ಪಿಸಿಆರ್ ಪ್ರಮಾಣ ಪತ್ರ ಪರಿಶೀಲಿಸಿದ್ದೇವೆ,  ಇದು ಮಂಜಾಗ್ರತಾ ಕ್ರಮವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries