ಕರಾಚಿ: ಭಾರತ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ನಿಂದ ಕಂಗೆಟ್ಟು ಹೋಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎದುರಾಗಿದೆ. ಆದರೆ ಈ ಬಾರಿ ಇಂಥದ್ದೊಂದು ದಾಲಿ ನಡೆಸಿರುವುದು ಇರಾನ್.
ಬಲೂಚಿಸ್ತಾನದಲ್ಲಿ ಇರಾನ್ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ತನ್ನ ಇಬ್ಬರು ಸೈನಿಕರನ್ನು ರಕ್ಷಿಸಲು ಇಂಥದ್ದೊಂದು ದಾಳಿ ನಡೆಸಿದೆ. ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ ಮಾದರಿಯಲ್ಲಿಯೇ ಇರಾನ್ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.
ಜೈಷ್ ಉಲ್ ಅಡ್ಲ್ ಉಗ್ರರ ಮೇಲೆ ಈ ದಾಳಿ ನಡೆಸಿರುವ ಇರಾನ್, ಉಗ್ರರ ವಶದಲ್ಲಿದ್ದ ನಮ್ಮ ಇಬ್ಬರು ಸೈನಿಕರನ್ನು ರಕ್ಷಣೆ ಮಾಡಿರುವುದಾಗಿ ಇರಾನ್ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಬುಧವಾರ ತಡರಾತ್ರಿ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸತ್ತಿರುವುದಾಗಿ ಇರಾನ್ ಹೇಳಿದೆ. ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿದ್ದಾರೆ. ಸೈನಿಕರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ಘೋಷಣೆ ಮಾಡಿದೆ.
ಎರಡೂವರೆ ವರ್ಷಗಳ ಹಿಂದೆ ಜೈಷ್ ಉಲ್ ಅಡ್ಲ್ ಸಂಘಟನೆಯು ಇರಾನ್ನ ಗಡಿಭದ್ರತಾ ಪಡೆಯ ಕಾವಲುಗಾರರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಅವರನ್ನು ಬಿಡಿಸುವ ಉದ್ದೇಶದಿಂದ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ಎಲೈಟ್ ರೆವಲೂಷನರಿ ಗಾರ್ಡ್ಸ್(ಐ.ಆರ್.ಜಿ.ಸಿ.) ಮಾಹಿತಿ ನೀಡಿದೆ.