ಆರ್‌ಎಸ್‌ಎಸ್ ಶಬರಿಮಲೆಯ ನಂಬಿಕೆಗೆ ಸಂಬಂಧಿಸಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. ಪ್ರತಿಶತಃ 50 ಆರ್‌ಎಸ್‌ಎಸ್ ಮುಖಂಡರು ಮಹಿಳೆಯರು ಸಬರಿಮಲೆ ದರ್ಶಿಸಬಹುದೆಂಬ ಅಭಿಪ್ರಾಯ ಹೊಂದಿದ್ದರು. ಆದರೆ ಪಂದಳಂನಲ್ಲಿ ನಡೆದ ನಾಮಜಪ ಮೆರವಣಿಗೆಗೆ ದೊರೆತ ಬೆಂಬಲವನ್ನು ಗಮನಿಸಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡರು ಎಂದು ಎಂದು ಎಸ್.ಕೃಷ್ಣಕುಮಾರ್ ಅವರು ಬಹಿರಂಗಪಡಿಸಿದರು.
ಮಹಿಳೆಯರು ಶಬರಿಮಲೆಗೆ ಪ್ರವೇಶಿಸಬೇಕು ಎಂಬುದು ಬಿಜೆಪಿಯ ಹಳೆಯ ನಿಲುವಾಗಿತ್ತು. ತೀರ್ಪಿನ ಒಂದು ವರ್ಷದ ಮೊದಲು ಕೆ ಸುರೇಂದ್ರನ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದರು ಎಂದು ಕೃಷ್ಣಕುಮಾರ್ ಹೇಳಿದ್ದಾರೆ.
ನಾಮಜಪ ಮೆರವಣಿಗೆಯ ನಂತರ ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂದು ಮಾಜಿ ಬಿಜೆಪಿ ಪತ್ತನಂತಿಟ್ಟು ಜಿಲ್ಲಾ ಸಮಿತಿ ಸದಸ್ಯ ಕೃಷ್ಣಕುಮಾರ್ ಹೇಳಿದ್ದಾರೆ.