ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಎಸೋಸಿಯೇಶನ್ ಕುಂಬಳೆ ಉಪಜಿಲ್ಲಾ ಸಮ್ಮೇಳನ ಮುಳ್ಳೇರಿಯ ಎಯುಪಿ ಶಾಲೆಯಲ್ಲಿ ಜರುಗಿತು.
ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್ ಉದ್ಘಾಟಿಸಿ ಮಾತನಾಡಿ, ಕೇರಳ ಸರ್ಕಾರವು ಶಿಕ್ಷಣ ವ್ಯವಸ್ಥೆಯಯನ್ನು ಬುಡಮೇಲು ಗೊಳಿಸಿದೆ. ಸಂಬಳ ಪರಿಷ್ಕರಣೆಯಲ್ಲಿ ಕೇರಳ ಸರ್ಕಾರಿ ನೌಕರರನ್ನು ವಂಚಿಸಿದೆ ಎಂದು ಆರೋಪಿಸಿದರು.
ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ಸಿಎ ರಾಜ್ಯ ಕಾರ್ಯದರ್ಶಿ ಕುಂಞÂ್ಞ ಕಣ್ಣನ್ ಕರಿಚ್ಚೇರಿ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ವಿಜಯನ್ ಮಾಸ್ತರ್, ರಾಜ್ಯ ಸಮಿತಿ ಸದಸ್ಯ ಶಶಿಧರ ಮಾಸ್ತರ್, ರಾಜೀವನ್, ಪ್ರಶಾಂತ್ ಕಾನತ್ತೂರು,ಕಾರಡ್ಕ ಕಾಂಗ್ರೆಸ್ ಮಂಡಲ ಅಧ್ಯಕ್ಷ ಪುರುಷೋತ್ತಮನ್, ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಅಧ್ಯಕ್ಷ ಸಂತೋಷ್ ಮಾಸ್ತರ್, ಕಾರ್ಯದರ್ಶಿ ಗೋಪಾಲಕೃಷ್ಣ.ಪಿ, ಕೋಶಾಧಿಕಾರಿ ರಾಧಾಕೃಷ್ಣ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಎಣ್ಮಕಜೆ ಗ್ರಾಮಪಂಚಾಯತಿ ಜನಪ್ರತಿನಿಧಿಯಾಗಿ ಆಯ್ಕೆಯಾದ ರಾಧಾಕೃಷ್ಣ ನಾಯಕ್ ಶೇಣಿ ಅವರನ್ನು ಅಭಿನಂದಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಕೆಪಿಎಸ್ಸಿಎ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಬಳಿಕ ಪ್ರತಿನಿಧಿ ಸಮ್ಮೇಳನ ಜರುಗಿತು. ಕೆಪಿಎಸ್ಸಿಎ ಕಾರ್ಯದರ್ಶಿ ವಿನೋದ್ ನಂದಕುಮಾರ್ ಸ್ವಾಗತಿಸಿ, ಕೋಶಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು. ಕಳೆದ ವರ್ಷದ ಲೆಕ್ಕಪತ್ರ ವರದಿ ಮಂಡಿಸಲಾಯಿತು, ನೂತನ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷೆಯಾಗಿ ಜಲಜಾಕ್ಷಿ ಟೀಚರ್, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಾಸ್ತರ್, ಕೋಶಾಧಿಕಾರಿಯಾಗಿ ನಿರಂಜನ್ ರೈ ಪೆರಡಾಲ ಆಯ್ಕೆಯಾದರು.