ನವದೆಹಲಿ: 'ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ಉಭಯ ರಾಷ್ಟ್ರಗಳ ಸೇನೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಇದರ ಬೆನ್ನಲೇ ಚೀನಾ ಮತ್ತು ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಶನಿವಾರ ಹೊಸದಾಗಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ' ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
' ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿಯಿರುವ ಚೀನಾ ಮೊಲ್ಡೊ ಗಡಿ ಪ್ರದೇಶದಲ್ಲಿ ಈ ಸಭೆ ನಡೆಯಲಿದೆ' ಎಂದು ಮೂಲಗಳು ಹೇಳಿವೆ.
'ಒಂಬತ್ತು ತಿಂಗಳ ಬಳಿಕ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಡದಿಂದ ಉಭಯ ರಾಷ್ಟ್ರಗಳ ಸೇನೆಗಳು ಹಿಂದಕ್ಕೆ ಸರಿದಿವೆ. ಈ ಪ್ರಕ್ರಿಯೆಯು ಫೆಬ್ರುವರಿ 10 ರಂದು ಆರಂಭವಾಯಿತು. ಸದ್ಯ ಎರಡು ಸೇನೆಯೂ ಸಂಪೂರ್ಣವಾಗಿ ತಮ್ಮ ಸೇನೆಯನ್ನು ವಾಪಾಸ್ ಕರೆಸಿಕೊಂಡಿವೆ' ಎಂದು ಮೂಲಗಳು ಮಾಹಿತಿ ನೀಡಿವೆ.