ಕಾಸರಗೊಡು: ಕಾಸರಗೋಡು, ಮಂಜೇಶ್ವರ ತಾಲೂಕುಗಳ ಸಾರ್ವಜನಿಕರ ದೂರುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮುಖ್ಯಮಂತ್ರಿ ಅವರ ಅದಾಲತ್ ಸಾಂತ್ವನ ಸ್ಪರ್ಶ ನೀಡಿದೆ. ಸಚಿವರಾದ ಇ.ಚಂದ್ರಶೇಖರನ್, ಕೆ.ಕೆ.ಶೈಲಜಾ ಟೀಚರ್, ಕಡನ್ನಪಳ್ಳಿ ರಾಮಚಂದ್ರನ್ ಅವರ ನೇತೃತ್ವದಲ್ಲಿ ಅದಾಲತ್ ನಡೆದಿದ್ದು, ಅವರು ಮೂವರು ಜಂಟಿಯಾಗಿ ಅದಾಲತ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ಹ;ವು ವಿಧದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆಯ ಸಂಕಷ್ಟ ಅರಿತುಕೊಳ್ಳಲು ಮತ್ತು ಅವುಗಳಿಗೆ ಪರಿಹಾರ ಒದಗಿಸಲು ಈ ಅದಾಲತ್ ಪೂರಕವಾಗಿದೆ. ಈಗಾಗಲೇ ಆನ್ ಲೈನ್ ಮೂಲಕ ಸಲ್ಲಿಕೆಯಾದ ದೂರುಗಳನ್ನು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ಜನಪರ ನೀತಿಯನ್ನು ಇದು ಸಾರುತ್ತದೆ ಎಂದವರು ನುಡಿದರು.
ಸಚಿವ ಇ.ಚಂದ್ರಶೇಖರನ್ ಅವರು ಮಾತನಾಡಿ ಸಾಂತ್ವನ ಸ್ಪಶರ್ಂ ಎಂಬ ಹೆಸರಿನ ಈ ಅದಾಲತ್ ಅನ್ವರ್ಥವಾಗಿದೆ ಎಂದರು.
ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅವರು ಮಾತನಾಡಿ ಹಲವು ಬಾರಿ ಮನವಿ ಸಲ್ಲಿಸಿ ಪರಿಹಾರ ಕಾಣದೇ ಇರುವ ಜನತೆಗೆ ಸಾಂತ್ವನ ನೀಡುವ ಉದ್ದೇಶದಿಂದ ಈ ಅದಾಲತ್ ಜರಗಿದೆ ಎಂದರು.
ದೂರುಗಳ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ಗಳಿದ್ದುವು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಅದಾಲತ್ ಜರುಗಿತು.
ಶಾಸಕ ಕೆ.ಕುಂಞÂ್ಞ ರಾಮನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಆನಂದ್ ಸಿಂಗ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಇತರ ಸಿಬ್ಬಂದಿ ಉಪಸ್ಥಿತರಿದ್ದರು.