ಪೆರ್ಲ:ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕ ಪ್ರವೇಶಿಸಲು ಕೋವಿಡ್ ಪ್ರಮಾಣ ಪತ್ರ ಕಡ್ಡಾಯವೆಂಬ ದಕ್ಷಿಣ ಕನ್ನಡ ಜಿಲ್ಲಾಡಳಿತದ ನಿರ್ಧಾರಕ್ಕೆ ಮಂಗಳವಾರ ಸಡಿಲಿಕೆ ನೀಡಲಾಗಿದ್ದು ಸಾರಡ್ಕ, ಪಾಣಾಜೆ, ಸುಳ್ಯಪದವು ಗಡಿ ಮೂಲಕ ಕರ್ನಾಟಕ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ, ಸಾರಡ್ಕ, ಸುಳ್ಯದ ಜಾಲ್ಲೂರು, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇನಾಲ ಗಡಿಗಳಲ್ಲಿ ಮಾತ್ರ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ದ.ಕ.ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಲು ಜಿಲ್ಲಾಡಳಿತ ತೀರ್ಮಾನಿಸಿತ್ತು.ಪಾಣಾಜೆ ಸ್ವರ್ಗ ಪೆರ್ಲ ಮತ್ತು ಪಾಣಾಜೆ ಕಾಟುಕುಕ್ಕೆ ಅಡ್ಕಸ್ಥಳ ರಸ್ತೆಗಳನ್ನು ಸಂಪ್ಯ ಪೆÇಲೀಸರು, ಪಾಣಾಜೆ ಗ್ರಾ.ಪಂ.ಅಧ್ಯಕ್ಷರು, ಪಿಡಿಒ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ದಿಢೀರ್ ಮುಚ್ಚಲಾಯಿತು.ಸ್ಥಳೀಯರಾದ ಪಿ.ಜೆ.ಶಂಕರನಾರಾಯಣ ಭಟ್, ಕೆ.ವೈ.ಸುಬ್ರಹ್ಮಣ್ಯ ಭಟ್, ಅಜಿತ್ ಸ್ವರ್ಗ, ರಾಮಚಂದ್ರ ಎಂ., ಮಹೇಶ ಬಿ., ಶ್ರೀಕೃಷ್ಣ ಭಟ್ ಕೆದಂಬಾಯಿಮೂಲೆ ಮತ್ತಿತರರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ಪುತ್ತೂರು, ದ.ಕ.ಜಿಲ್ಲೆಯ ಇತರ ಭಾಗಗಳಿಗೆ ತೆರಳಿದವರಿಗೆ ತೊಂದರೆಯಾಗದಂತೆ ಒಂದು ದಿನದ ಮಟ್ಟಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಸ್, ಇತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಯಿತು.
ಪಾಣಾಜೆ ಗಡಿ ಮೂಲಕ ಮುಂದಿನ ಆದೇಶ ಲಭಿಸುವ ತನಕ ಬುಧವಾರದಿಂದ ಅಂತರರಾಜ್ಯ ಬಸ್ ಸಂಚಾರಕ್ಕೆ ನಿರ್ಬಂಧ ಏರ್ಪಡಿಸುವುದಾಗಿ, ಹಾಗೂ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಸಹಿತ ಇತರ ವಾಹನಗಳಲ್ಲಿ ಕರ್ನಾಟಕ ಪ್ರವೇಶ ಅನುಮತಿಸುವುದಾಗಿ ಸಂಪ್ಯ ಪೆÇಲೀಸರು, ಪಾಣಾಜೆ ಗ್ರಾ.ಪಂ.ಅಧ್ಯಕ್ಷರು, ಪಿ.ಡಿ.ಒ. ತಿಳಿಸಿದ್ದಾರೆ.
ಎಣ್ಮಕಜೆ, ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ವಿದ್ಯಾರ್ಥಿಗಳು ಆರ್ಲಪದವು, ಬೆಟ್ಟಂಪಾಡಿ, ಪುತ್ತೂರು, ವಿಟ್ಲ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳನ್ನು ಆಶ್ರಯಿಸಿದ್ದು, ಬಸ್ ಸಂಚಾರಕ್ಕೆ ನಿರ್ಬಂಧ ಏರ್ಪಡಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕರ್ನಾಟಕ ವಿವಿಧ ಭಾಗಗಳಲ್ಲಿ ಉದ್ಯೋಗಿಗಳಿಗೆ ನಿರ್ವಹಿಸುತ್ತಿರುವವರು. ತೊಂದರೆಗೆ ಸಿಲುಕಲಿದ್ದಾರೆ.