ಕುಂಬಳೆ: ಸೀತಾಂಗೋಳಿಯ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಡಾಕ್ಟರ್ಸ್ ಹಾಸ್ಪಿಟಲ್ ಕುಂಬಳೆ ಇದರ ಸಹಕಾರದೊಂದಿಗೆ ಉಚಿತ ಓರ್ಥೋ ವೈದ್ಯಕೀಯ ಶಿಬಿರ ಇಂದು(ಭಾನುವಾರ) ಸೀತಾಂಗೋಳಿಯ ಕ್ಲಬ್ ಪರಿಸರದಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ತನಕ ನಡೆಯಲಿರುವ ಶಿಬಿರದಲ್ಲಿ ಎಲುಬು-ಮೂಳೆ ತಜ್ಞರಾದ ಡಾ.ಪ್ರಶಾಂತ್ ಎಸ್ ತಪಾಸಣೆ ಹಾಗೂ ಚಿಕಿತ್ಸೆ ಮಾರ್ಗದರ್ಶನ ನೀಡುವರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.