ಕೊಟ್ಟಾಯಂ: ಸಂತಾನೋತ್ಪತ್ತಿ ಋತುವಿನ ಆರಂಭದೊಂದಿಗೆ ಇರವಿಕುಳಂ ರಾಷ್ಟ್ರೀಯ ಉದ್ಯಾನವನ್ನು ಸೋಮವಾರದಿಂದ ಮುಚ್ಚಲಾಗಿದೆ. ಎರಡು ತಿಂಗಳ ಬಳಿಕ ಪ್ರವಾಸಿಗರಿಗೆ ಕುರಿಗಳನ್ನು ನೋಡುವ ಅವಕಾಶ ನೀಡಲಾಗುತ್ತದೆ.
ಇಲ್ಲಿಯವರೆಗೆ ಕೆಲವು ಕುರಿ ಮರಿಗಳಿಗೆ ಜನ್ಮ ನೀಡಿವೆ ಎಂದು ಇರವಿಕುಳಂ ವನ್ಯಜೀವಿ ವಾರ್ಡನ್ ಆರ್.ಲಕ್ಷ್ಮಿ ಹೇಳಿರುವರು. ಜನರ ಗದ್ದಲವಿಲ್ಲದೆ, ಕಡವೆಗಳ ಆರಾಮ ಮತ್ತು ನವಜಾತ ಶಿಶುಗಳ ಸುರಕ್ಷತೆಗಾಗಿ ಉದ್ಯಾನವನ್ನು ಜನವರಿಯಿಂದ ಎರಡು ತಿಂಗಳು ಮುಚ್ಚಲಾಗುವುದು.
ಕೋವಿಡ್ ವ್ಯಾಪಕತೆ ಹಿನ್ನೆಲೆಯಲ್ಲಿ ಇರವಿಕುಳಂ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವವರಿಗೆ ಅನುಮತಿ ನಿರಾಕರಿಸಲಾಗಿತ್ತು. ಬಳಿಕ ಕಳೆದ ಡಿಸೆಂಬರ್‍ನಲ್ಲಿ ಮತ್ತೆ ಭೇಟಿಗೆ ಅವಕಾಶ ನೀಡಲಾಯಿತು. ಇದರೊಂದಿಗೆ ರಾಜಮಳವು ಕಿಕ್ಕಿರಿದು ತುಂಬಿತ್ತು. ಪ್ರತಿದಿನ ಸರಾಸರಿ 1,500 ಜನರು ಭೇಟಿ ನೀಡುತ್ತಿದ್ದರು.
ಕಳೆದ ಋತುವಿನಲ್ಲಿ ಸಂತಾನೋತ್ಪತ್ತಿ ಬಳಿಕ ಮಾರ್ಚ್ 22 ರಂದು ಉದ್ಯಾನವನವನ್ನು ತೆರೆಯಲಾಯಿತು, ಆದರೆ ಕೋವಿಡ್ ಮುನ್ನೆಚ್ಚರಿಕೆಯ ಭಾಗವಾಗಿ ಕೆಲವು ದಿನಗಳ ನಂತರ ಮುಚ್ಚಲಾಯಿತು. ಕಳೆದ ಋತುವಿನಲ್ಲಿ 111 ಕುರಿ ಮರಿಗಳು ಜನಿಸಿವೆ. ಇರವಿಕುಳಂ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 223 ಕುರಿಗಳಿವೆ.
ಕುರಿಗಳನ್ನು ನೋಡಲು ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಪ್ರವಾಸಿಗರು ಅಕ್ಟೋಬರ್ ನಿಂದ ಜನವರಿ ವರೆಗೆ ಇಲ್ಲಿಗೆ ಭೇಟಿ ನೀಡುತ್ತಾರೆ. 2019 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಕೇವಲ 1,34,957 ಜನರು ಭೇಟಿ ನೀಡಿದ್ದರು. ನಾಲ್ಕು ಲಕ್ಷ ಪ್ರವಾಸಿಗರನ್ನು ಆಕರ್ಷಿಸಲು ಅರಣ್ಯ ಇಲಾಖೆ ಆಶಿಸಿದೆ. ಪ್ರವಾಹ ದುರಂತದ ನಂತರ ಸಂದರ್ಶಕರ ಸಂಖ್ಯೆ ತೀವ್ರವಾಗಿ ಕುಸಿಯಿತು. ಇರವಿಕುಳಂಗೆ ತಲಪುವ ಚೆರಿಯಪುಳ ಸೇತುವೆ ಕೊಚ್ಚಿ ಹೋಗಿದ್ದು, ಭೂಕುಸಿತದಿಂದಾಗಿ ರಸ್ತೆಗಳು ಹಾನಿಗೊಂಡಿವೆ.