ಮಾಸ್ಕೋ:ಸಾಮಾನ್ಯವಾಗಿ ಹೆಸರಿನಲ್ಲೇ ಇರುವಂತೆ ಹಕ್ಕಿ ಜ್ವರವೆಂದರೆ ಕೇವಲ ಪಕ್ಷಿಗಳಿಗೆ ಮಾತ್ರ ಬರುತ್ತಿದೆ ಎಂದುಕೊಂಡರೆ ಅದು ತಪ್ಪು, ಹಕ್ಕಿ ಜ್ವರ ಮನುಷ್ಯನಿಗೂ ಹರಡಿರುವ ಪ್ರಕರಣ ರಷ್ಯಾದಲ್ಲಿ ಬೆಳಕಿಗೆ ಬಂದಿದೆ.
H5N8 ಸೋಂಕು ಮನುಷ್ಯನಿಗೂ ಕೂಡ ಹರಡಿದೆ.ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.ದಕ್ಷಿಣ ರಷ್ಯಾದ ಕೋಳಿ ಸಾಕಣೆ ಕೇಂದ್ರದಲ್ಲಿ ಏಳು ಮಂದಿ ಕಾರ್ಮಿಕರಿಗೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ.ಕಾರ್ಮಿಕರಿಗೆ ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆಗಳು ಕಂಡುಬಂದಿರಲಿಲ್ಲ. ಏವಿಯನ್ ಫ್ಲೂ ಮನುಷ್ಯನಿಗೆ ಹರಡಿರುವುದು ಇದೇ ಮೊದಲ ಬಾರಿಗೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಏವಿಯನ್ ಇನ್‌ಫ್ಲುಯೆನ್ಜಾ ವೈರಸ್‌ಗಳಲ್ಲಿ ವಿಭಿನ್ನ ಉಪ ವಿಭಾಗಗಳಿವೆ. ಸಾಂಕ್ರಾಮಿಕ್ ತಳಿ H5N8 ಪಕ್ಷಿಗಳಿಗೆ ಮಾರಕವಾಗಿದ್ದರೂ, ಹಿಂದೆಂದೂ ಮನುಷ್ಯರಿಗೆ ಹರಡಿರುವ ಕುರಿತು ವರದಿಯಾಗಿರಲಿಲ್ಲ. ರಷ್ಯಾದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದ ಕಾರ್ಮಿಕರೆಲ್ಲರೂ ಲಕ್ಷಣ ರಹಿತರಾಗಿದ್ದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಸಾಮಾನ್ಯವಾಗಿ ಪ್ರಾಣಿಗಳು ಅಥವಾ ಕಲುಷಿತ ಪರಿಸರದೊಂದಿಗೆ ನೇರ ಸಂಪರ್ಕ ಹೊಂದಿದಾಗ ಸೋಂಕಿಗೆ ಒಳಗಾಗುತ್ತಾರೆ. ಮಾನವರಲ್ಲಿ ನಿರಂತರ ಹರಡುವಿಕೆ ಇರುವುದಿಲ್ಲ.
ಒಂದೊಮ್ಮೆ H5N1 ತಗುಲಿದಾಗ ಇದು ಗಂಭೀರ ಸ್ವರೂಪ ಪಡೆದುಕೊಂಡು ಶೇ.60ರಷ್ಟು ಮಂದಿ ಸಾಯುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.