ಕಾಸರಗೋಡು: ಕಾಸರಗೊಡು ಜಿಲ್ಲಾಡಳಿತ ಮತ್ತು ಮಹಿಳಾ ಸಂರಕ್ಷಣೆ ಕಚೇರಿಯ ಜಂಟಿ ವತಿಯಿಂದ ಜಾರಿಗೊಳಿಸುವ "ಕೂಟ್" ಯೋಜನೆ ಮೂಲಕ ವಿಧವೆಯರ ಪುನರ್ ವಿವಾಹಕ್ಕೆ ಪೆÇ್ರೀತ್ಸಾಹ ನೀಡಲಾಗುವುದು.
ಜಿಲ್ಲೆಯ ವಿಧವೆಯರಲ್ಲಿ ಯಾರನ್ನಾದರೂ ವಿವಾಹವಾಗುವ ಬಯಕೆಯಿದ್ದಲ್ಲಿ ಪುರುಷರು ಅರ್ಜಿ ಸಲ್ಲಿಸಬಹುದು. ಫೆ.28ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 6 ತಿಂಗಳ ಅವಧಿಯಲ್ಲಿ ಪಡೆಯಲಾದ ಪಾಸ್ ಪೆÇೀರ್ಟ್ ಗಾತ್ರದ ಛಾಯಾಚಿತ್ರ, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ , ಸಾಮಾಜಿಕ- ಆಋಥಿಕ ಸ್ಥಿತಿ ಉತ್ತಮವಾಗಿದೆ ಎಂದು ಖಚಿತಪಡಿಸುವ ಪೆÇಲೀಸ್ ಸಟೇಷನ್ ಮಾಸ್ಟರ್ ಅವರ ದೃಡೀಕರಣ ಪತ್ರ, ಗಂಭೀರ ರೋಗ ಹೊಂದಿಲ್ಲ ಎಂದು ಖಚಿತಪಡಿಸುವ ಸರಕಾರಿ ವೈದ್ಯಧಿಕಾರಿ ಅವರ ದೃಡೀಕರಣ ಪತ್ರ, ವಯೋಮಾನ ದಾಖಲಾತಿ ಪತ್ರ, ಸ್ವಾಭಾವ ಮತ್ತು ಕೌಟುಂಬಿಕ ಆರ್ಥಿಕ-ಸಾಮಾಜಿಕ ಹಿನ್ನೆಲೆ ಖಚಿತಪಡಿಸುವ ವಾರ್ಡ್ ಸದಸ್ಯರ ದೃಡೀಕರಣ ಪತ್ರ ಸಹಿತ ಅರ್ಜಿ ಸಲ್ಲಿಸಬೇಕು. ವಿಳಾಸ: ವಿಮೆನ್ ಪೆÇ್ರಟೆಕ್ಷನ್ ಆಫೀಸರ್, ಮಹಿಳಾ ಶಿಶು ವಿಕಸನ ಡಿಪಾರ್ಟ್ ಮೆಂಟ್, ಕಾಸರಗೋಡು ಸಿವಿಲ್ ಸ್ಟೇಷನ್, ವಿದ್ಯಾನಗರ, ಅಂಚೆ-671123. ದೂರವಾಣಿ ಸಂಖ್ಯೆ: 04994-255266, 256266.