ತಿರುವನಂತಪುರ: ಮಹಿಳೆಯರಿಗೆ ದೌರ್ಜನ್ಯ ಎಸಗುವ ನೌಕರರಿಗೆ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಇನ್ನು ಉದ್ಯೋಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಎಂ.ಡಿ. ಬಿಜು ಪ್ರಭಾಕರ್ ಸೂಚನೆ ನೀಡಿರುವರು.
ಗುರುವಾರ ಪೊಂಕುನ್ನಂನಿಂದ ಬಂದ ದೂರಿನ ಬಗ್ಗೆ ಬಲವಾದ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಬಿಜು ಪ್ರಭಾಕರ್, ಮಹಿಳೆಯರು ರಾತ್ರಿ ವೇಳೆ ಪ್ರಯಾಣಿಸಬಹುದಾದರೆ, ಅವರು ಭಯಮುಕ್ತ ದೇಶ ಎಂಬ ಹೆಮ್ಮೆ ಪಡಬೇಕು ಎಂದಿರುವರು.
ಮಹಿಳೆ ರಾತ್ರಿ ಪೆÇಂಕುನ್ನಂನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ನಿರ್ವಾಹಕ ಅನುಚಿತವಾಗಿ ವರ್ತಿಸಿದನೆಂದು ಮಹಿಳೆಯೊಬ್ಬರುಎಂ.ಡಿ.ಗೆ ದೂರು ನೀಡಿದ್ದರು. ರಾತ್ರಿ ವೇಳೆ ಮಹಿಳೆಯರಿಗೆ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಭಾರತ ಸ್ವತಂತ್ರ ದೇಶ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಬಿಜು ಪ್ರಭಾಕರ್ ಹೇಳಿರುವರು.