ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್)ಜಿಲ್ಲಾ ಸಮಾವೇಶ ನಾಳೆ(ಫೆ.7) ಬೆಳಿಗ್ಗೆ 10 ರಿಂದ ಕಾಸರಗೋಡು ಮುನ್ಸಿಫಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭವು ಸಂಪೂರ್ಣ ಕೋವಿಡ್ ಮಾನದಂಡಗಳೊಂದಿಗೆ ನಡೆಯಲಿದೆ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಞಂಗಾಡ್, ನೀಲೇಶ್ವರ, ಮಂಜೇಶ್ವರ, ಕಾರಡ್ಕ ಹಾಗೂ ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಸದಸ್ಯ ಕಲಾವಿದರು ಪಾಲ್ಗೊಳ್ಳುವರು. ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಸವಾಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ ವರ್ಣ ಉದ್ಘಾಟಿಸುವರು. ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್ ಅಚಂಬಿತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಜ್ಯ ಕಾರ್ಯದರ್ಶಿ ವಿ.ವಿ. ವಿಜಯನ್ ಉಪಸ್ಥಿತರಿರುವರು.
ಈ ಸಂದರ್ಭ ಸವಾಕ್ ಪ್ರತಿವರ್ಷ ಕೊಡಮಾಡುವ ಐವರು ಸಾಧಕ ಕಲಾವಿದರಿಗಿರುವ ಕಲಾರತ್ನ ಪುರಸ್ಕಾರ ಪ್ರದಾನ ನಡೆಯಲಿದೆ. ದಿವಾಣ ಶಿವಶಂಕರ ಭಟ್(ಯಕ್ಷಗಾನ), ಸುರೇಶ್ ಬೇಕಲ್(ನಾಟಕ), ಮಧುಸೂದನ ಬಲ್ಲಾಳ್ (ನಾಟಕ), ನರಸಿಂಹ ಬಲ್ಲಾಳ್ (ಯಕ್ಷಗಾನ), ನಾರಾಯಣನ್ ಕಾವುಂಗಾಲ್(ಪೂಕ್ಕಾವಡಿ ಅಮ್ಮನ್ ಕುಡಂ ಕಲಾವಿದ)ಕಲಾರತ್ನ ಪುರಸ್ಕಾರ ನೀಡಲಾಗುವುದು. ಜೊತೆಗೆ ಇತರ ಸಾಧಕರನ್ನೂ ಈ ಸಂದರ್ಭ ಗೌರವಿಸಲಾಗುವುದು.