ತಿರುವನಂತಪುರ: ಮಹಿಳೆಯರ ಸುರಕ್ಷತೆಗಾಗಿ 'ನಿರ್ಭಯಂ' ಎಂಬ ಮೊಬೈಲ್ ಪೋನ್ ಆಫ್ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪತ್ನಿ ಪತ್ನಿ ಕಮಲಾ ವಿಜಯನ್ ಜೊತೆಯಾಗಿ ಶನಿವಾರ ಬಿಡುಗಡೆಗೊಳಿಸಿದರು.ಈ ಅಪ್ಲಿಕೇಶನ್ ನಲ್ಲಿರುವ ಹೆಲ್ಪ್ ಎಂಬ ಬಟನ್ ನ್ನು ಐದು ಸೆಕೆಂಡುಗಳ ಕಾಲ ಅಮುಕಿದಾಗ ಸಹಾಯ ಬೇಡಿದ ವ್ಯಕ್ತಿಯ ಲೊಕೇಶನ್ ನ್ನೊಳಗೊಂಡು ಹತ್ತಿದ ಪೋಲೀಸ್ ನಿಯಂತ್ರಣ ಕೇಂದ್ರ ಅಥವಾ ಠಾಣೆಗೆ ಸಂಪರ್ಕಿಸಲ್ಪಡುತ್ತದೆ.
ಇಂಟರ್ನೆಟ್ ವ್ಯಾಪ್ತಿಯಿಲ್ಲದೆ ಈ ಅಪ್ಲಿಕೇಶನ್ ಮೂಲಕ ಸಂದೇಶಗಳು ಮತ್ತು ನಾವಿರುವ ಸ್ಥಳಗಳು ಪೋಲೀಸರಿಗೆ ಲಭ್ಯವಾಗುತ್ತದೆ. ಆಕ್ರಮಣಕಾರರ ಗಮನಕ್ಕೆ ಬಾರದಂತೆ ಪೋಟೋ, ವೀಡಿಯೋ ಮುದ್ರಿಕೆಗಳನ್ನೂ ಸೆರೆಹಿಡಿಯಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‍ಫಾರ್ಮ್‍ಗಳ ಮೇಲೆ ಅಪ್ಲಿಕೇಶನ್ ಲಭ್ಯವಿದೆ.
ಸೋಷಿಯಲ್ ಮೀಡಿಯಾ ಮತ್ತು ಇತರೆಡೆ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.