ತಿರುವನಂತಪುರ: ಪಾಲ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪಧಿಸಲು ಅವಕಾಶ ನೀಡದ ವಿವಾದದ ಹಿನ್ನೆಲೆಯಲ್ಲಿ ಎನ್.ಸಿ.ಪಿ. ತೊರೆದ ಶಾಸಕ ಮಾಣಿ ಸಿ.ಕಾಪ್ಪನ್ ಹೊಸ ಪಕ್ಷವನ್ನು ರಚಿಸಿದ್ದಾರೆ. ಪಕ್ಷದ ಹೆಸರು ರಾಷ್ಟ್ರೀಯವಾದಿ ಕಾಂಗ್ರೆಸ್ ಕೇರಳ (ಎನ್.ಸಿ.ಕೆ) ಎಂದು ಹೆಸರಿಸಲಾಗಿದೆ. ಮಾಣಿ ಸಿ.ಕಾಪ್ಪನ್ ಅಧ್ಯಕ್ಷರಾಗಿರುವರು. ಕಾರ್ಯಕಾರಿ ಅಧ್ಯಕ್ಷರಾಗಿ ಬಾಬು ಕಾರ್ತಿಕೇಯನ್ ಆಯ್ಕೆಯಾದರು.
ಜುಲ್ಫಿಕರ್ ಮಯೂರಿ ಮತ್ತು ಪಿ ಗೋಪಿನಾಥ್ ಉಪಾಧ್ಯಕ್ಷರಾಗಿರುವರು. ಹನ್ನೊಂದು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಯುಡಿಎಫ್ ನೊಂದಿಗೆ ಸೇರ್ಪಡೆಗೊಳಿಸಲು ಕೇಳಿಕೊಂಡಿದ್ದೇನೆ ಮತ್ತು ಅದನ್ನು ಸ್ವೀಕರಿಸುವ ಭರವಸೆ ಇದೆ ಎಂದು ಕಾಪ್ಪನ್ ಹೇಳಿದರು. ಪಾಲಾ ಸೇರಿದಂತೆ ಮೂರು ಸ್ಥಾನಗಳಿಗೆ ಯುಡಿಎಫ್ ನಿಂದ ಸ್ಥಾನ ನೀಡಲು ಕೇಳಲಾಗಿದೆ.
ಎಲ್.ಡಿ.ಎಫ್ ತನಗೆ ತೀವ್ರವಾಗಿ ಅವಮಾನಗೈದಿದೆ ಎಂದು ಕಾಪ್ಪನ್ ಹೇಳಿದ್ದಾರೆ. ಎಡಪಕ್ಷ ಮೂರು ಚುನಾವಣೆಗಳಲ್ಲಿ ಮಾಣಿ ಸಿ.ಕಾಪ್ಪನ್ ಎದುರು ಪರಾಭವಗೊಂಡಿತ್ತು. ಬಳಿಕ ಮಾಣಿಯವರನ್ನು ತನ್ನತ್ತ ಸೆಳೆದ ಎಡರಂಗ ಇದೀಗ ಆ ಸ್ಥಾನಕ್ಕೆ ಎಡರಂಗದಿಂದ ಅಭ್ಯರ್ಥಿ ಇಳಿಸಲು ಚಿಂತನೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಮಾಣಿ ಸಿ.ಕಾಪ್ಪನ್ ಅವರನ್ನು ಕಾಂಗ್ರೆಸ್ಸ್ ಗೆ ಆಹ್ವಾನಿಸಿದ್ದಾರೆ. ಆದರೆ ಮಾಣಿ ಸಿ ಕಾಪ್ಪನ್ ಹೊಸ ಪಕ್ಷವನ್ನು ರಚಿಸಲು ಮತ್ತು ಪಕ್ಷದ ಸ್ಥಾನಮಾನವನ್ನು ಮರಳಿ ಪಡೆಯಲು ಪಟ್ಟುಹಿಡಿದಿದ್ದು, ಯುಡಿಎಫ್ ನೊಂದಿಗೆ ಸೇರಿಕೊಂಡರೂ ತನ್ನ ಸ್ಥಾನಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇರಿಸಿದೆ.