HEALTH TIPS

ಕಾಸರಗೋಡಿನ ಕೇರಳ-ಕರ್ನಾಟಕ ಗಡಿ ಮುಚ್ಚುಗಡೆ-ಕೇಂದ್ರದ ಗಮನಕ್ಕೆ ತರುವುದಾಗಿ ಪಿಣರಾಯಿ ವಿಜಯನ್

        

         ತಿರುವನಂತಪುರ: ಕೇರಳದಲ್ಲಿ ಞoರೋನಾ ವಿಸ್ತರಣೆ ಮುಂದುವರೆದಂತೆ ಕರ್ನಾಟಕದ ಗಡಿಗಳನ್ನು ಮುಚ್ಚಿರುವುದನ್ನು ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕರ್ನಾಟಕದ ಈ ಕ್ರಮವು ಅಂತರ್ ರಾಜ್ಯ ಪ್ರಯಾಣವನ್ನು ನಿರ್ಬಂಧಿಸಬಾರದು ಎಂಬ ಕೇಂದ್ರದ ಪ್ರಸ್ತಾಪಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಕೇಂದ್ರಕ್ಕೆ ತಿಳಿಸುವುದಾಗಿ ಸಿಎಂ ಸೋಮವಾರ ಹೇಳಿದರು.


         ಕಾಸರಗೋಡು ಜಿಲಲೆಯಿಂದ ಕೇರಳ-ಕರ್ನಾಟಕ ಸಂಪರ್ಕದ  ಅನೇಕ ಗಡಿ ರಸ್ತೆಗಳನ್ನು ಸೋಮವಾರದಿಂದ ಮುಚ್ಚಲಾಗಿದೆ. ಯಾವುದೇ ರಾಜ್ಯವು ಅಂತರ್ ರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಬಾರದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ನಿರ್ದೇಶಿಸಿತ್ತು. ಆದರೆ, ಕರ್ನಾಟಕವು ಕೇರಳದ ವಾಹನಗಳನ್ನು, ಪ್ರಯಾಣಿಕರನ್ನು ನಿರ್ಬಂಧಿಸಿದೆ ಎಂದು ಸಿಎಂ ಆರೋಪಿಸಿದರು.

         ಗಡಿಯಲ್ಲಿ, ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ನಕಾರಾತ್ಮಕ ಪ್ರಮಾಣಪತ್ರವನ್ನು ತೋರಿಸಿದವರಿಗೆ ಮಾತ್ರ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶವಿರುವುದು ಕಂಡುಬಂದಿದೆ. ಈ ವಿಷಯವನ್ನು ರಾಜ್ಯ ಪೋಲೀಸ್ ಮುಖ್ಯಸ್ಥರ ಗಮನಕ್ಕೆ ತರಲಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸುವುದಾಗಿ ಸಿಎಂ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries