ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿದ ನೂತನ ನೈವೇದ್ಯ ಕೊಠಡಿಯ ಶಿಲಾನ್ಯಾಸವು ಶಿಲ್ಪಿ ಕೃಷ್ಣ ಪ್ರಸಾದ್ ಮುನಿಯಂಗಳ ಇವರ ಸಮಕ್ಷಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶನಿವಾರ ಜರಗಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ.ಬಾಬು, ನವೀಕರಣ ಸಮಿತಿಯ ಅಧ್ಯಕ್ಷ ಯು.ಟಿ.ಆಳ್ವ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷರಾದ ಡಾ.ಬಿ.ಎಸ್.ರಾವ್, ಮುರಳಿ ಗಟ್ಟಿ, ಮಂಜುನಾಥ ಕಾಮತ್, ಮನೋಹರ ಏರಿಕ್ಕಳ, ಉಮೇಶ್ ನಾೈಕ್, ನಾರಾಯಣಯ್ಯ, ಕ್ಷೇತ್ರ ಸಂರಕ್ಷಣಾ ಸಮಿತಿಯ ಎಂ.ಅಪ್ಪಯ್ಯ ನಾೈಕ್, ಭಕ್ತ ಸಮಿತಿಯ ಪ್ರಭಾಶಂಕರ ಮಾಸ್ತರ್, ಜಗದೀಶ್ ಕೂಡ್ಲು, ಮಾಧವ ಮಾಸ್ತರ್ ಕೂಡ್ಲು, ಕ್ಷೇತ್ರದ ಅರ್ಚಕ ವೃಂದದವರು ಮತ್ತು ನೌಕರ ವೃಂದದವರು, ರಾ.ಸ್ವ.ಸಂಘದ ಪದ್ಮನಾಭ ಆಚಾರ್ಯ ಊರಿನ ಪ್ರಮುಖರು ಉಪಸ್ಥಿತರಿದ್ದರು.