ತಿರುವನಂತಪುರ: ಕೋವಿಡ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ
ಪರಿಶೀಲಿಸಲು ಕೇಂದ್ರ ತಂಡ ಮತ್ತೆ ಕೇರಳಕ್ಕೆ ಆಗಮಿಸಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಸಹಿತ ತಜ್ಞರು ತಂಡವನ್ನು ಮುನ್ನಡೆಸುತ್ತಾರೆ.
ಕೇರಳದ ಜೊತೆಗೆ ಸೋಂಕು ಹೆಚ್ಚಿರುವ ಮಹಾರಾಷ್ಟ್ರಕ್ಕೂ ವಿಶೇಷ ತಂಡವನ್ನು ಕೇಂದ್ರ ಕಳುಹಿಸಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ, ಕೋವಿಡ್ ಪ್ರಸ್ತುತ ಅತೀ ಹೆಚ್ಚಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲೇ ಶೇಕಡಾ 70 ರಷ್ಟು ಸೋಂಕಿತರು ಕೇರಳ ಮತ್ತು ಮಹಾರಾಷ್ಟ್ರದಲ್ಲಿರುವುದಾಗಿ ಹೇಳಲಾಗಿದೆ.