ಪಾಲಕ್ಕಾಡ್: ಪಾಲಕ್ಕಾಡ್ ಕುಣಿಸ್ಸೆರಿ ಬಳಿ ನೀರಲ್ಲಿ ಆಟವಾಡುತ್ತಿದ್ದ ಮೂವರು ಸಹೋದರರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಕರಿಯಕ್ಕಾಡ್ ಜಜೀರ್ ಎಂಬವರ ಮಕ್ಕಳಾದ ಜಿನ್ಷಾದ್ (12), ರಿನ್ಷಾದ್ (7) ಮತ್ತು ರಿಫಾಸ್ (3) ಎಂಬವರು ಮುಳುಗಿ ಮೃತಪಟ್ಟ ದುರ್ದೈವಿ ಮಕ್ಕಳಾಗಿದ್ದಾರೆ. ಮನೆಯ ಬಳಿ ಆಟವಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಮನೆಯ ಸಮೀಪ ಮೈದಾನದಲ್ಲಿ ಆಟವಾಡುತ್ತಿದ್ದಾಗ ಮಕ್ಕಳು ಅದೇ ಪರಿಸರದಲ್ಲಿದ್ದ ಕೆರೆಗೆ ಬಿದ್ದು ಮೃತಪಟ್ಟರೆಂದು ಎಂದು ವರದಿಯಾಗಿದೆ. ಸ್ಥಳೀಯರು ಬಂದು ಮಕ್ಕಳನ್ನು ಮೇಲೆತ್ತಿದರೂ ಅಷ್ಟರಲ್ಲಿ ಮಕ್ಕಳ ಪ್ರಾಣಪಕ್ಷಿ ಹಾರಿಹೋಗಿತ್ತು ಎಮದು ತಿಳಿದುವಬಂದಿದೆ. ಶವಗಳನ್ನು ಆಲತ್ತೂರಿನನ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ವರದಿಯ ಪ್ರಕಾರ, ಮಕ್ಕಳು ಮನೆಯ ಸಮೀಪದ ಬಯಲಲ್ಲಿ ಆಟವಾಡುತ್ತಿದ್ದಾಗ ಕೈಗಳ ಕೊಳೆಗಳನ್ನು ತೊಳೆಯಲು ಕೆರೆಗೆ ಇಳಿದಿರಬೇಕು ಎ0ದು ಶಂಕಿಸಲಾಗಿದೆ. ಸ್ಥಳೀಯರು ಘಟನೆಯ ಮಾಹಿತಿ ತಿಳಿದು ಧಾವಿಸಿ ಮೇಲೆತ್ತಿದರೂ ಮಕ್ಕಳನ್ನು ರಕ್ಷಿಸಲಾಗಿಲ್ಲ ಎಂದು ಆಲತ್ತೂರು ಶಾಸಕ ಕೆ.ಡಿ.ಪ್ರಸೇನನ್ ತಿಳಿಸಿದ್ದಾರೆ. ಪೋಲೀಸರು ಮಹಜರು ನಡೆಸಿ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದ್ದಾರೆ.