ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51ನ್ನು ಉಡಾವಣಾ ವಾಹಕವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ.
ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಉಪಗ್ರಹ ಇದಾಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿರುವುದು ತೀವ್ರ ಸಂತಸ ಉಂಟುಮಾಡುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು ಇದಕ್ಕಾಗಿ ನಾನು ಬ್ರೆಜಿಲ್ ನ ವಿಜ್ಞಾನಿಗಳ ತಂಡವನ್ನು ಅಭಿನಂದಿಸುತ್ತೇನೆ ಎಂದು ಇಸ್ರೊ ಮುಖ್ಯಸ್ಥ ಕೆ ಶಿವನ್ ಹೇಳಿದ್ದಾರೆ.
ಅಮೆಜೋನಿಯಾ1 ಯಶಸ್ವಿಯಾಗಿ ಪಿಎಸ್ ಎಲ್ ವಿಸಿ51ನಿಂದ ನಾಲ್ಕನೇ ಹಂತದಲ್ಲಿ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗಿದೆ. ಸಹ ಪ್ರಯಾಣದ ಉಪಗ್ರಹಗಳು ಕೂಡ ವಾಹಕದಿಂದ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.